ಕನ್ನಡ ರಾಜ್ಯೋತ್ಸವಕ್ಕೆ ಆರಕ್ಷಕ ಜನಸ್ನೇಹಿ ಗ್ರಂಥಾಲಯ

ಬೆಂಗಳೂರು: ಆಗ್ನೇಯ ಪೊಲೀಸ್ ವಿಭಾಗದಿಂದ ಪೊಲೀಸ್ ಠಾಣೆಗಳನ್ನು ಕನ್ನಡ ತನದಿಂದ ಅಲಂಕರಿಸಿ ಮೂರು ಠಾಣೆಗಳಲ್ಲಿ ಆರಕ್ಷಕ ಜನಸ್ನೇಹಿ ಗ್ರಂಥಾಲಯವನ್ನು ಆರಂಭಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಸರಳ ಮತ್ತು ಅರ್ಥ ಪೂರ್ಣವಾಗಿ ಇಂದು (ಮಂಗಳವಾರ) ಆಚರಿಸಲಾಯಿತು.

ವಿಭಾಗದ ವ್ಯಾಪ್ತಿಯ ಕೋರಮಂಗಲ ಪೊಲೀಸ್ ಠಾಣೆ, ಮೈಕೊ ಲೇಔಟ್ ಪೊಲೀಸ್ ಠಾಣೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ. ತಮ್ಮ ಠಾಣೆ ವ್ಯಾಪ್ತಿಯ ಹಿರಿಯ‌ ಚೇತನಗಳ ಮೂಲಕ ಉದ್ಘಾಟಿಸಿ ಜನಸ್ನೇಹಿ ವ್ಯವಸ್ಥೆಗೆ ಗ್ರಂಥಾಲಯದ ಮೂಲಕ ಮುನ್ನುಡಿ ಬರೆಯಲಾಗಿದೆ.

ಜನರು ಮತ್ತು ಪೊಲೀಸರೊಂದಿಗೆ ಉತ್ತಮ ಭಾಂದವ್ಯ, ಪೊಲೀಸ್‌ ಠಾಣೆಗೆ ಆಗಮಿಸಿದ ಜನರಿಗೆ ಅನಗತ್ಯ‌ ಸಮಯ ವ್ಯಯಿಸುವುದಕ್ಕಿಂತ ಗ್ರಂಥಾಲಯದ ಪುಸ್ತಕ ಓದಲು ಇದು ಜನಸ್ನೇಹಿ ಗ್ರಂಥಾಲಯ ಸಹಕಾರಿಯಾಗಲಿದೆ. ಪೊಲೀಸ್ ಭಯ ದೂರ ಮಾಡುವ ಸದುದ್ದೇಶವು ಗ್ರಂಥಾಲಯದ ಕಲ್ಪನೆಗಿದೆ.

ಉದಯವಾಗಲಿ ಚೆಲುವ ಕನ್ನಡನಾಡು ಖ್ಯಾತಿಯ ಹುಯಿಲಗೋಳು ನಾರಾಯಣರಾವ್ ಅವರ ಮೊಮ್ಮಗಳು ರಾಧಾಕುಲಕರ್ಣಿ ಅವರು ಕೋರಮಂಗಲ ಠಾಣೆಯ ಜನಸ್ನೇಹಿ ಗ್ರಂಥಾಲಯಕ್ಕೆ ಚಾಲನೆ ನೀಡಿದರೆ, ಸಾಹಿತಿ ಡಾ.ಬಾಬು ಕೃಷ್ಣಾಮೂರ್ತಿ ಅವರು ಮೈಕೊ ಲೇಔಟ್ ನ ಗ್ರಂಥಾಲಯಕ್ಕೆ, ಬುಕ್ ಬ್ರಹ್ಮಾದ ಸಂಸ್ಥಾಪಕ‌ ಸತೀಶ ಚಪ್ಪರಕಿ ಅವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಆರಕ್ಷಕ ಜನಸ್ನೇಹಿ‌ ಗ್ರಂಥಾಲಯಕ್ಕೆ ಚಾಲನೆ ನೀಡಿದರು.

 
 
 
 
 
 
 

Leave a Reply