“ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ”

ಉಡುಪಿ:- ಡಿಸೆಂಬರ್ ೨೧-೨೦೨೨ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು,
ಇಲ್ಲಿ ಸುಶಾಸನ ಮಾಸದ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಕಾಲೇಜಿನ ಪಿ.ಜಿ. ಎ.ವಿ. ಸಭಾಂಗಣದಲ್ಲಿ ಬುಧವಾರ ಪೂರ್ವಹ್ನ ೧೦.೩೦ಕ್ಕೆ ಜರಗಿತು.

ಪ್ರೊ. ಜೆನಿಫರ್ ಲೋಲಿಟಾ, ಜಂಟಿ ನಿರ್ದೇಶಕರು, ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸ್ಪರ್ಧಾಳುಗಳಿಗೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು
ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಲ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದೇವಿ ಪ್ರಸಾದ ವಿಶೇಷಾಧಿಕಾರಿ ಮತ್ತು ಡಾ. ಗಣನಾಥ ಎಕ್ಕಾರ್, ನಿವೃತ್ತ ಪ್ರಾಂಶುಪಾಲರು, ಸ.ಪ್ರ.ದ.ಕಾಲೇಜು, ತೆಂಕನಿಡಿಯೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಪ್ರೊ. ಭಾಸ್ಕರ ಶೆಟ್ಟಿ ಎಸ್ ವಹಿಸಿದ್ದರು.

ಕರ್ನಾಟಕ ರಾಜ್ಯಾದ್ಯಂತ ಒಟ್ಟು 25 ಜಿಲ್ಲೆಗಳಿಂದ ಸ್ಪರ್ಧಾಳುಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ವಿದ್ಯಾ ಡಿ., ಸಂಚಾಲಕರು ಸಾಂಸ್ಕೃತಿಕ ಸಮಿತಿ ಸ್ವಾಗತಿಸಿ, ಶ್ರೀ ಸೋಜನ್ ಕೆ.ಜಿ. ಸಂಚಾಲಕರು ಐಕ್ಯೂಎಸಿ
ವಂದಿಸಿದರು. ಕು. ನಿಧಿ, ದ್ವಿತೀಯ ಎಂ.ಕಾo. ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply