ಬೆಂಗಳೂರು:ರೈತ ಹಾಗೂ ಕಾರ್ಮಿಕ ಸಂಘಗಳು ಮತ್ತು ವಿವಿಧ ಸಂಘಟನೆಗಳು ಸೇರಿ ಸೆ.28 ಸೋಮವಾರ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದ ಸರ್ಕಾರದ ವಿರುದ್ಧವಾಗಿ ಈ ಬಂದ್ ನಡೆಸಲಾಗುವುದು ಎಂದು ತಿಳಿಸಿದೆ.
ಈ ಹಿಂದೆ ಸೆ.25ರಂದು ಸಿಎಂ ಯಡಿಯೂರಪ್ಪ ಹಾಗೂ ರೈತ ಮುಖಂಡರ ನಡುವೆ ನಡೆದಿದ್ದ ಮಾತುಕತೆ ವಿಫಲ ವಾಗಿರುವ ಕಾರಣ ಸೋಮವಾರ ಬಂದ್ ನಡೆಸಲು ರೈತ ಹಾಗೂ ಕಾರ್ಮಿಕ ಸಂಘಗಳು ತಿರ್ಮಾನಿಸಿವೆ. ರೈತ ಹಾಗೂ ಕಾರ್ಮಿಕ ಸಂಘಟನೆಗಳ ಈ ಬಂದ್ ಕೆರೆಗೆ ಆಟೋ ಚಾಲಕರು, ಓಲಾ, ಊಬರ್, ಟ್ಯಾಕ್ಸಿ ಚಾಲಕರು ಸಾಥ್ ನೀಡಲಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಂ ಪಾರ್ಕ್ ನ ವರೆಗು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಬಸ್ ಸಂಚಾರ, ಹೋಟೆಲ್, ರೆಸ್ಟೋರೆಂಟ್, ಸರ್ಕಾರಿ ಕಚೇರಿ, ಹಾಲು ತರಕಾರಿ ಹಾಗೂ ದಿನಸಿ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ. ಸದ್ಯ ಕರ್ನಾಟಕ ಬಂದ್ ಹಿನ್ನಲೆ ನಾಳೆ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಸೇರಿದಂತೆ ಬೇರೆಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತದ ಪರೀಕ್ಷೆಗಳು, ಬೆಂಗಳೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯದ ಸೇರಿದಂತೆ ಹಲವು ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದ್ದು ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಸೆ.29ಕ್ಕೆ ನಡೆಯುತ್ತದೆ.