ಸಮಸ್ಯೆಗಳ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿ :ಸಿಎಂ ಬಿ.ಎಸ್. ಯಡಿಯೂರಪ್ಪ  

ಬೆಂಗಳೂರು: ಕರೊನಾ ವೈರಸ್ ಸಂಕಷ್ಟದ​ ನಡುವೆಯೂ ರಾಷ್ಟ್ರವು ಇಂದು 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಹೊಸ ಹುಮ್ಮಸ್ಸಿನಿಂದಲೇ ತೊಡಗಿದೆ. ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದ್ದು, ರಾಜ್ಯದಲ್ಲೂ ಸಹ ಕೋವಿಡ್​ ಮುನ್ನೆಚ್ಛರಿಕಾ ಕ್ರಮದೊಂದಿಗೆ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಬೆಂಗಳೂರಿನ ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯವನ್ನುದ್ದೇಶಿಸಿ ಮಾತನಾಡಿದರು 

ಸಹೋದರ ಸಹೋದರಿಯರಿಗೆ 74 ವರ್ಷದ ಸ್ವಾತಂತ್ರ ದಿನದ ಶುಭಾಶಯ ಕೋರುತಿದ್ದೇನೆ ಎಂದು ಭಾಷಣ ಆರಂಭಿಸಿದ ಸಿಎಂ ಬಿಎಸ್​ವೈ, ಸ್ವಾತಂತ್ರಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಿದರು.  ಒಂದು ವರ್ಷದಲ್ಲಿ ನಮಗೆ ಹಲವು ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಚಕ್ರ ಚಲಿಸಿದೆ. ನೆರೆ ಹಾಗೂ ಕರೊನಾವನ್ನು ಮೆಟ್ಟಿನಿಂತಿದ್ದೇವೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಕಾಯಕವೇ ಕೈಲಾಸ, ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ತತ್ವ ಪಾಲನೆ ಮಾಡ್ತಿದ್ದೇವೆ ಎಂದರು.

ಕರೋನ ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಿದ್ದೇವೆ. ಬರೀ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಫೀವರ್ ಕ್ಲಿನಿಕ್ ಮತ್ತು ಕರೊನಾ ಆಸ್ಪತ್ರೆ ರಚನೆ ಮಾಡಿದ್ದೇವೆ. ಆಯುಸ್ಮಾನ್ ಭಾರತ ಅಡಿಯಲ್ಲಿ 1 ಕೋಟಿ 30 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿದರು. ಲಾಕ್​ಡೌನ್​ನಿಂದ ಆರ್ಥಿಕ ವ್ಯವಹಾರ ಕುಸಿತ ಕಂಡಿತು. ಅದೆಲ್ಲದವನ್ನ ದಿಟ್ಟವಾಗಿ ಎದುರಿಸಿ, ವಾಣಿಜ್ಯ ಚಟುವಟಿಕೆಗಳನ್ನು ಮತ್ತೆ ಚೇತರಿಕೆ ಮಾಡುವ ಕೆಲಸ ಮಾಡಿದ್ದೇವೆ. ಲಾಕ್​ಡೌನ್​ನಿಂದ ಅಸಂಘಟಿತ ನೆರವಿಗೆ ಸರ್ಕಾರ ಪರಿಹಾರ ನೀಡಿದೆ. ಮೂರು ಸಾವಿರ ಕೋಟಿ ಪರಿಹಾರ ನೀಡಿದ್ದೇವೆ ಎಂದರು. ಇದೇ ವೇಳೆ ಹಗಲಿರುಳು ಕೆಲಸ ‌ಮಾಡಿದ ಕರೊನಾ ವಾರಿಯರ್ಸ್​ರನ್ನು ಸಿಎಂ ಸ್ಮರಿಸಿದರು. ಕರೊನಾ ವಾರಿಯರ್ಸ್ ಮೃತಪಟ್ಟರೇ ಮೂವತ್ತು ಲಕ್ಷ ಪರಿಹಾರ ನೀಡುವುದಾಗಿ ಹೇಳಿದರು. ಯೋಧರಷ್ಟೇ ಸಮರ್ಥವಾಗಿ ಕರೊನ ವಾರಿಯರ್ಸ್ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೇಂದ್ರ ಘೋಷಣೆ ಜತೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಕರೊನ ವಿರುದ್ಧ ಗೆಲ್ಲುವ ದಾಪುಗಾಲು ಹಾಕಿದ್ದೇವೆ. ಜನರು ಸಪೋರ್ಟ್ ಇಲ್ಲದಿದ್ದರೆ ಕರೋನ ಗೆಲ್ಲಲು ಸಾಧ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಕರೊನಾ ಯುದ್ಧ ಗೆಲ್ಲಲು ಸಹಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲೂ ಆನ್​ಲೈನ್ ಶಿಕ್ಷಣ ಕೊಡಲು ಚಿಂತನೆ ನಡೆಸಿದ್ದೇವೆ. ವಿಧ್ಯಾಧನ ಯೋಜನೆ ಅಡಿಯಲ್ಲಿ ಶಿಕ್ಷಣ ನೀಡಲಾಗುವುದು. ರೈತನಿಗೆ ಕೇಂದ್ರ ಸರ್ಕಾರ ಆರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ. ಕೊಡಲಿದೆ. ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ, ಜೋಳ ಖರೀದಿ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿ ಸಿದ್ದೇವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ರೈತರ ಕೆಲಸ ‌ಮಾಡಿದ್ದೇವೆ. ಇದು ರೈತರಿಗೆ ಬೆಲೆ ಮತ್ತು ಅರ್ಥಿಕ ಸಬಲರಾಗಲು ಕಾರಣವಾಗಿದೆ. ಅಂತರ್ಜಲ ಮಟ್ಟ ಏರಿಕೆ ಮಾಡಲು ರೈತನ ಜತೆಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಧ್ಯೇಯ. ಹೈದರಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಘೋಷಣೆ ಮಾಡಿದ್ದೇವೆ. ಆರೋಗ್ಯ ಮಿಷನ್​ ಕ್ರಾಂತಿಕಾರಿಯಾಗಿದೆ. ಪ್ರತಿಯೊಬ್ಬರಿಗೂ ಹೆಲ್ತ್​ ಕಾರ್ಡ್​ ದೊರಕಿದೆ. ಕೇಂದ್ರ ಸರ್ಕಾರದ ಆತ್ಮಾ ನಿರ್ಭಾರ್ ಯೋಜನೆ ಭರವಸೆಯ ಹೊಂಗಿರಣವಾಗಿದೆ. ನಾವೀಗ ವಿಶ್ವದಲ್ಲೇ ಸರ್ವಶ್ರೇಷ್ಠರಾಗಿದ್ದೇವೆ ಎಂದು ತಿಳಿಸಿದರು.

 
 
 
 
 
 
 
 
 
 
 

Leave a Reply