‘ಆತ್ಮ ನಿರ್ಭರ ಭಾರತ’ ಭಾರತೀಯರ ಶಕ್ತಿ~ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: 74ನೇ ಸ್ವಾತಂತ್ರೋತ್ಸವದಂದು ಭಾರತದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಆತ್ಮ ನಿರ್ಭರದ ಆತ್ಮ ವಿಶ್ವಾಸ ಹೊಂದಿರುವ, ಯುವ ಜನತೆಯ ಶಕ್ತಿ ಹೊಂದಿರುವ ದೇಶ ಭಾರತ ಎಂದರು. ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದರು.

ಆದರೆ ಈ ವರ್ಷದ ಆಚರಣೆಗೆ ಕೊರೋನಾ ಅಡ್ಡಿಯಾಗಿದ್ದು, ಮಕ್ಕಳು ಕೆಂಪುಕೋಟೆಯಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದರು. ಭಾರತ ಯುವ ಜನತೆಯನ್ನು ಹೊಂದಿರುವ ದೇಶ. ಆತ್ಮ ನಿರ್ಭರದ ಆತ್ಮ ವಿಶ್ವಾಸ ಹೊಂದಿರುವುದು ಭಾರತ. ಆತ್ಮ ನಿರ್ಭರ ಭಾರತವು 130 ಕೋಟಿ ಜನರಿಗೆ ಆತ್ಮ ನಿರ್ಭರ ಭಾರತ ಜನರ ಮಂತ್ರವಾಗಿದೆ. ಅವರಿಗೆ ಭಾರತದ ಸಂಕಲ್ಪದ ಶಕ್ತಿ ಇದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ತಿಳಿಸಿದರು.

ಹಳ್ಳಿಗಳಿಂದ ನಗರಗಳಿಗೆ ಬರುವವರಿಗೆ ಉದ್ಯೋಗ, ವಸತಿ ಅವಕಾಶ ನೀಡಲಾಗುತ್ತದೆ. ಕೃಷಿ ಕ್ಷೇತ್ರಗಳ ಕಾನೂನು ಸರಳಗೊಳಿಸಲಾಗಿತ್ತು, ರೈತರನ್ನು ಸಂಕಷ್ಟದಿಂದ ಮುಕ್ತಗೊಳಿಸಿದ್ದೇವೆ. ರೈತ ದೇಶದಯಾವುದೇ ಭಾಗದಲ್ಲಾದರೂ ರೈತ ಉತ್ಪನ್ನ ಮಾಡಬಹುದು. ಆತ್ಮ ನಿರ್ಭರ ಕೃಷಿ..ಆತ್ಮ ನಿರ್ಭರ ರೈತ ಎಂದು ಪ್ರಧಾನಿ ಮೋದಿ ತಿಳಿಸಿದರು. ಕೊರೋನಾ ವೇಳೆಯಲ್ಲಿ ಭಾರತಲ್ಲಿಯೇ ಪಿಪಿಇ ಕಿಟ್ ಹಾಗೂ ವೆಂಟಿ ಲೇಟರ್ ಗಳನ್ನು ಉತ್ಪಾದಿಸಿದ್ದೇವೆ. ಆತ್ಮ ನಿರ್ಭರ ಭಾರತದಲ್ಲಿ ವೋಕ್ ಫಾರ್ ಲೋಕಲ್ ನಮ್ಮ ಮಂತ್ರವಾಗಿರಬೇಕು. ಸ್ಥಳಿಯ ಉತ್ಪನ್ನಗಳನ್ನು ನಾವು ಇಷ್ಟಪಡಬೇಕು. ಇಲ್ಲದಿದ್ದರೆ ಭಾರತದ ಉತ್ತಮ ಉತ್ಪನ್ನಗಳ ತಯಾರಿಗೆ ಪ್ರೋತ್ಸಾಹ ನೀಡಲಿದೆ ಎಂದರು.

ಭಾರತದ ಕಳೆದ ವರ್ಷ ಶೇ.18ರಷ್ಟು ವಿದೇಶದ ನೇರ ಹೂಡಿಕೆ ಪಡೆದಿದ್ದು, ಜಗತ್ತಿಗೆ ಭಾರತದ ಮೇಲೆ ವಿಶ್ವಾಸ ಇರಿಸಿದೆ. ಭಾರತದ ಕೃಷಿ ಕ್ಷೇತ್ರದ ತ್ಮ ನಿರ್ಭರವಾಗಬೇಕಿದ್ದು, ಈಗಾಗಲೇ ಕೃಷಿ ಮೂಲ ಸೌಕರ್ಯ ನಿಧಿಯನ್ನು ಸ್ಥಾಪಿಸಿ ಕೃಷಿಕರ ಮೂಲಸೌಕರ್ಯ ಹೆಚ್ಚಿಸಲು 1 ಲಕ್ಷ ಕೋಟಿ ರೂ ನಿಗದಿಪಡಿಸಲಾಗಿದೆ. 2014ಕ್ಕೂ ಮೊದಲು ಭಾರತದಲ್ಲಿ 5 ಡಜನ್ ಹಳ್ಳಿಗಳಿಗೆ ಮಾತ್ರ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಆದರೆ ಈಗ 1.5 ಲಕ್ಷ ಗ್ರಾಮಗಳಿಗೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿಗಳಿಗೂ ದೊರೆಯಲಿದೆ ಎಂದು ಮೋದಿ ತಿಳಿಸಿದರು.

ಭಾರತದ ಕಳೆದ ವರ್ಷ ಶೇ.18ರಷ್ಟು ವಿದೇಶದ ನೇರ ಹೂಡಿಕೆ ಪಡೆದಿದ್ದು, ಜಗತ್ತಿಗೆ ಭಾರತದ ಮೇಲೆ ವಿಶ್ವಾಸ ಇರಿಸಿದೆ. ಭಾರತದ ಕೃಷಿ ಕ್ಷೇತ್ರದ ತ್ಮ ನಿರ್ಭರವಾಗಬೇಕಿದ್ದು, ಈಗಾಗಲೇ ಕೃಷಿ ಮೂಲ ಸೌಕರ್ಯ ನಿಧಿಯನ್ನು ಸ್ಥಾಪಿಸಿ ಕೃಷಿಕರ ಮೂಲಸೌಕರ್ಯ ಹೆಚ್ಚಿಸಲು 1 ಲಕ್ಷ ಕೋಟಿ ರೂ ನಿಗದಿಪಡಿಸಲಾಗಿದೆ. 2014ಕ್ಕೂ ಮೊದಲು ಭಾರತದಲ್ಲಿ 5 ಡಜನ್ ಹಳ್ಳಿಗಳಿಗೆ ಮಾತ್ರ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಆದರೆ ಈಗ 1.5 ಲಕ್ಷ ಗ್ರಾಮಗಳಿಗೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿಗಳಿಗೂ ದೊರೆಯಲಿದೆ ಎಂದರು.

ಮುಂದಿನ ಪೀಳಿಗೆ ಮಕ್ಕಳಿಗೆ ಶಿಕ್ಷಣ ಅತೀ ಮುಖ್ಯ ಭಾಗವಾಗಿದ್ದು, ಈ ಹಿನ್ನಲೆ ಭಾರತದಲ್ಲಿ ನೂತನ ಶಿಕ್ಷಣ ನೀತಿ ರಚಿಸಲಾಗಿದೆ. ಭಾರತದ ಸ್ತ್ರೀಯರ ವಿವಾಹದ ವಯೋಮಿತಿಯಲ್ಲಿ ಬದಲಾವಣೆಯನ್ನು ಮಾಡಲಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳ ಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಭಾರತದಲ್ಲಿ ಕೊರೋನಾ ಲಸಿಕೆ ಶೀಘ್ರವೇ ಬರಲಿದ್ದು, ಭಾರತೀಯ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರವೇ ಸಮ್ಮತಿಗಳಿಸಲಿದೆ ಎಂದರು.

ದೇಶದಲ್ಲಿನ ಕರಾವಳಿ ಭಾಗಗಳಲ್ಲಿ ಆಗುತ್ತಿರುವ ಭಾರಿ ಮಳೆ ಅವಾಂತರಕ್ಕೆ ನೂತನ ಯೋಜನೆ ಜಾರಿಯಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ಎನ್ ಸಿಸಿ ಕೆಡೆಟ್ಸ್ ಯೋಜನೆ ವಿಸ್ತರಣೆಯಾಗಲಿದೆ. ಅವರಿಗೆ ಮೂರು ಭಾರತೀಯ ಸೇನೆಯಿಂದ ತರಬೇತಿ ನೀಡಲಾಗುತ್ತದೆ ಎಂದರು. ಈಗಾಗಲೇ ರಾಮ ಜನ್ಮಭೂಮಿ ಅಯೋಧ್ಯೆಯ ವಿವಾದವು ಶಾಂತಿಯುತವಾಗಿ ಪರಿಹಾರ ದೊರಕಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.

ಭಾರತೀಯ ಸೇನೆ ಗಡಿಯಲ್ಲಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಿದೆ. ಲಡಾಖ್ ನಲ್ಲಿ ಯೋಧರು ತಮ್ಮ ತಾಕತ್ತು ಸಾಭೀತು ಪಡಿಸು ತ್ತಿದ್ದಾರೆ. ಎಲ್ ಎ ಸಿ ಹಾಗೂ ಎಲ್ ಒಸಿ ಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ತರುವವರಿಗೆ ಭಾರತ ಅವರದ್ದೇ ರೀತಿಯಲ್ಲಿ ಉತ್ತರ ನೀಡುತ್ತಿದೆ ಎಂದರು. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಜೈ ಹಿಂದ್ ಎಂಬ ಘೋಷಣೆಯ ಮೂಲಕ ಪ್ರಧಾನಿ ಮೋದಿ ಸ್ವಾತಂತ್ರೋತ್ಸವದ ಭಾಷಣಕ್ಕೆ ವಿರಾಮ ನೀಡಿದರು.

 
 
 
 
 
 
 
 
 
 
 

Leave a Reply