ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಉಚಿತ ಆರೋಗ್ಯ ಪರೀಕ್ಷಾ ಕಿಟ್ : ಬೊಮ್ಮಾಯಿ

ಉಡುಪಿ: ಕೋವಿಡ್ ಎರಡನೇ ಅಲೆಯನ್ನು ಜಿಲ್ಲೆಯಲ್ಲಿ ನಿಯಂತ್ರ‍್ರಿಸಲು , ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಕಡ್ಡಾಯವಾಗಿ ಉಚಿತ ಆರೋಗ್ಯ ಪರೀಕ್ಷಾ ಕಿಟ್‌ಗಳನ್ನು ನೀಡಬೇಕು ಎಂದು ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿ ಗತಿಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಹೋಂ ಐಸೋಲೇಶನ್ ನಲ್ಲಿರುವ ವರಿಗೆ ಉಚಿತವಾಗಿ ಆಕ್ಷಿಜಿನ್ ಪ್ರಮಾಣ ಪರೀಕ್ಷಿಸಿಕೊಳ್ಳುವ ಮತ್ತು ದೇಹದ ತಾಪಮಾನ ಪರಿಶೀಲಿಸಿಕೊಳ್ಳುವ ಉಪಕರಣಗಳು ಸೇರಿದಂತೆ ಅಗತ್ಯ ಮಾತ್ರೆಗಳನ್ನೊಳಗೊಂಡ ಕಿಟ್ ಗಳನ್ನು ಕಡ್ಡಾಯವಾಗಿ ನೀಡುವಂತೆ ಅದಿಕಾರಿಗಳಿಗೆ ಸೂಚಿಸಿದರು.

ಇದರಿಂದ ರೋಗಿಗಳಿಗೆ ಆಕ್ಷಿಜಿನ್ ಪ್ರಮಾಣ ಕಡಿಮೆಯಿದ್ದಲ್ಲಿ , ಕೂಡಲೆ ಆಸ್ಪತ್ರೆಗಳಿಗೆ ದಾಖಲಿಸಲು ಸಾಧ್ಯವಾಗುತ್ತದೆ ಹಾಗೂ ಮರಣ ಸಂಭವಿಸುವುದನ್ನು ತಡೆಯಲು ಸಾಧ್ಯವಾಗಲಿದೆ..

ಅಲ್ಲದೇ ಪ್ರತೀ ದಿನ ಹೋಂ ಐಸೋಲೇಷನ್ ನಲ್ಲಿ ಇರುವವರನ್ನು ಭೇಟಿ ಮಾಡಿ, ಅವರ ಆರೋಗ್ಯ ಪರಶೀಲನೆ ಕುರಿತು ವರದಿ ಪಡೆಯುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಬಹರೈನ್ ಮತ್ತು ಕುವೈತ್ ನಿಂದ ಬರುವ ಆಕ್ಸಜಿನ್ ನಲ್ಲಿ ಸಹ ಜಿಲ್ಲೆಗ ಸಾಕಷ್ಟು ಪ್ರಮಾಣದ ಆಕ್ಸಿಜಿನ್ ಸರಬರಾಜು ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ,

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ 1500 ಎಲ್‌ಪಿಎಂ ನ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ದೊರೆತಿದೆ. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜಿನ್ ಸಂಗ್ರಹಿಸಲು ಸಿಲೆಂಡರ್ ಗಳ ಕೊರತೆಯಿದ್ದಲ್ಲಿ ಖಾಸಗಿ ಯವರಿಂದ ಲೀಸ್ ಆಧಾರದಲ್ಲಿ ಖಾಲಿ ಸಿಲೆಂಡರ್ ಗಳನ್ನು ಪಡೆಯಿರಿ.

ಆದರೆ ಆಕ್ಸಿಜಿನ್ ಅನಗತ್ಯ ಪೋಲಾಗದಂತೆ ಎಚ್ಚರವಹಿಸಿ ಎಂದು ಹೇಳಿದರು.‌ ಜಿಲ್ಲಾಸ್ಪತ್ರೆ ಯಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರ ಆರಂಭಿಸಲು ಸೂಚನೆ ನೀಡಲಾಗಿದೆ . ಜಿಲ್ಲೆಗೆ 480 ರೆಮಿಡಿಸಿವರ್ ಸರಬರಾಜು ಮಾಡಿದ್ದು, ಇನ್ನೂ ಹೆಚ್ಚುವರಿಯಾಗಿ 1000 ರೆಮಿಡಿಸಿವರ್ ಸರಬರಾಜು ಮಾಡುವಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಗೆ ಯಾವುದೇ ಅಗತ್ಯ ಔಷಧಗಳು ಮತ್ತು ಆಕ್ಸಿಜಿನ್ ಕೊರತೆಯಿದ್ದಲ್ಲಿ ಕನಿಷ್ಠ 2 ದಿನ ಮೊದಲೇ ತಮ್ಮ ಗಮನಕ್ಕೆ ತರುವಂತೆ ಸಚಿವರು ಸೂಚಿಸಿದರು.

ಸಭೆಯಲ್ಲಿ ಶಾಸಕರ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ,ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ಡಾ.ಸುಧೀರ್ ಚಂದ್ರ ಸೂಡಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply