ಉಗ್ರರನ್ನು ಗುಂಡಿಕ್ಕಿ ಕೊಲ್ಲಿ ಸರಕಾರಕ್ಕೆ ಶ್ರೀರಾಮಸೇನೆ ತಾಖಿತ್ತು

ಶನಿವಾರ ಸಂಜೆ ಮಂಗಳೂರಿನ ಹೊರವಲಯದ ನಾಗುರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವು ಸರಕಾರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀರಾಮ್ ಸೇನೆಯು ಗಂಭೀರ ಆರೋಪ ಮಾಡಿದೆ. ಇತ್ತೀಚೆಗೆ ಕೇಂದ್ರ ಸರಕಾರವು ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿರುವುದರಿಂದ ಸರಕಾರವು ಹಾಗೂ ಗುಪ್ತಚರ ಇಲಾಖೆಯು ಅಲರ್ಟ್ ಆಗಿರಬೇಕಿತ್ತು.

ಆದರೆ ನಿನ್ನೆ ನಡೆದ ಘಟನೆಯು ಜನಸಾಮಾನ್ಯರಲ್ಲಿ ನಡುಕ ಹುಟ್ಟಿಸುವಂತಿದೆ. ಹಿಂದುತ್ವದ ಭದ್ರಕೋಟೆಯಾದ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಪ್ರವೀಣ್ ನೆಟ್ಟಾರ್ ಹತ್ಯೆ ಸಹಿತ ನಡೆದ ಅನೇಕ ಅಹಿತಕರ ಘಟನೆಗಳು ಸರಕಾರದ ಕಣ್ಣನ್ನು ತೆರೆಸದಿರುವುದು ಸಾಮಾನ್ಯ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ.

ಹಿಂದುತ್ವ ಅ​ದಾರಲ್ಲಿ ಗೆದ್ದ ಜನಪ್ರತಿನಿಧಿಗಳು ಅನ್ಯ ಧರ್ಮದವರೊಂದಿಗೆ ವಹಿವಾಟಿನಲ್ಲಿ ಶಾಮೀಲು ಆಗಿರುವುದರಿಂದ ಇಂಥ ಪ್ರಕರಣಕ್ಕೆ ಕುಮ್ಮಕ್ಕು ನೀಡುವಂತಿದೆ. ಹಾಗೂ ಸರಕಾರ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಇನ್ನು ಮುಂದೆಯೂ ಕರಾವಳಿಯಲ್ಲಿ ಇಂತಹ ಘಟನೆಗಳು ಸಂಭವಿಸಿದರೆ ಅದಕ್ಕೆ ನೇರ ಹೊಣೆ ಸರಕಾರ ಹಾಗೂ ಕರಾವಳಿಯ ಜನ ಪ್ರತಿನಿಧಿಗಳು ಎಂದು ಶ್ರೀರಾಮ ಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಗಂಭೀರವಾಗಿ ಆರೋಪ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply