“ನವೀನ ನ್ಯಾಯಶಾಸ್ತ್ರ ನ್ಯಾಯವಾದಿಗಳಿಗೆ ಉಪಯುಕ್ತ” ಪ್ರೋ। ಕೆ.ಇ. ದೇವನಾಥನ್

ವಕೀಲ ವೃತ್ತಿಗೆ ನ್ಯಾಯಶಾಸ್ತ್ರ ತುಂಬಾ ಉಪಕಾರಿಯಾಗಿದೆ. ನ್ಯಾಯ ಎಂದರೆ ಅನುಮಾನ ಅಥವಾ ಯುಕ್ತಿ ಎಂದರ್ಥ. ಅನುಮಾನಕ್ಕೆ ಅನೇಕ ಭಾಗಗಳಿವೆ. ಈ ಹತ್ತು ಅವಯವ ವಾಕ್ಯಗಳೂ ಕೂಡಾ ಪರಸ್ಪರ ಆಕಾಂಕ್ಷಾ ಕ್ರಮದಲ್ಲಿರುತ್ತವೆ. ಆದ್ದರಿಂದ ಇದು ವಿಚಾರ ಮಾಡುವ ಒಂದು ವ್ಯವಸ್ಥಿತ ಪದ್ಧತಿಯಾಗಿದೆ. 
ಮೊದಲಿಗೆ ಹೇಳಿಕೆಯೊಂದನ್ನು ನೀಡಿ ಅದಕ್ಕೆ ಕಾರಣವನ್ನು ಹೇಳುವುದು, ಆಕಾರಾಣವನ್ನು ಉಪಪಾದನೆ ಮಾಡುವುದು, ತನ್ಮೂಲಕ ಹೇಳಿಕೆಯ ಸರ‍್ಥನೆ. ಹೀಗೆ ಈ ಶಾಸ್ತ್ರದ ಶೈಲಿ ತುಂಬಾ ವೈಜ್ಞಾನಿಕವಾಗಿದೆ. ನ್ಯಾಯಶಾಸ್ತ್ರದ ಮತ್ತೊಂದು ಕೊಡುಗೆ, ನಿಗ್ರಹಸ್ಥಾನಗಳು. ವಾದದಲ್ಲಿ ಸೋಲನ್ನು ನಿರ್ಣಯಿಸುವ ಅಂಶಗಳೇ ನಿಗ್ರಹ ಸ್ಥಾನಗಳು. ಇಪ್ಪತ್ತೊಂದು ಸಂಖ್ಯೆಯ ನಿಗ್ರಹಸ್ಥಾನಗಳಲ್ಲಿ ಕೆಲವು ಇಂದಿಗೆ ಅಪ್ರಸ್ತುತವಾಗಿಯೂ ಕಾಣಬಹುದು. 
ಶಾಸ್ತ್ರ ವಿಚಾರಕ್ಕಾಗಿ ಮೀಸಲಾಗಿದ್ದರೂ ನ್ಯಾಯ ನಿರ್ಣಯಗಳಿಗೆ ಉಪಯುಕ್ತವಾದ ಅಂಶಗಳು ಬಹಳಷ್ಟು ಇವೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಕೆ.ಇ. ದೇವನಾಥನ್ ಅವರು ಪ್ರಥಮಭಾರಿಗೆ ಉಡುಪಿ ಸಂಸ್ಕೃತಕಾಲೇಜಿಗೆ ಭೇಟಿನೀಡಿ ಕಾವ್ಯಶಾಸ್ತ್ರವಿಚಾರ ಪರಿಷತ್ತಿನ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ‍್ಯಕ್ರಮದಲ್ಲಿ ನ್ಯಾಯಶಾಸ್ತ್ರದ ಮಹತ್ವ ಎಂಬ ವಿಷಯದ ಕುರಿತು ಮಾತನಾಡುತ್ತಾ ಅಭಿಪ್ರಾಯಪಟ್ಟರು. 
ಅದಕ್ಕೂ ಮೊದಲು ಕಾಲೇಜಿನ ನವೀಕೃತ ಜ್ಯೋತಿಷ-ಆಗಮ ಪ್ರದರ್ಶಿನಿಯ ಉದ್ಘಾಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಹರಿದಾಸ ಭಟ್ಟರು ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಲಕ್ಷ್ಮೀನಾರಾಯಣ ಭಟ್ಟರು, ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿ ಗಳಾದ ದೇವಾನಂದ ಉಪಾಧ್ಯಾಯರು, ಕೋಶಾಧಿಕಾರಿಗಳಾದ ಚಂದ್ರಶೇಖರ ಆಚಾರ್ಯರು, ಕಾಲೇಜಿನ ನಿವೃತ್ತ ಗ್ರಂಥಪಾಲಕರಾದ ಎ. ಹರಿಕೃಷ್ಣರಾವ್ ಉಪಸ್ಥಿತರಿದ್ದರು. 
ವಿದ್ಯಾರ್ಥಿಗಳಾದ ಮುರಳೀಕೃಷ್ಣ ಮತ್ತಿತರರು ವೇದಘೋಷಗೈದರು.  ಉಪಪ್ರಾಚರ‍್ಯರಾದ ಪ್ರೋ. ಸತ್ಯನಾರಾಯಣ ಆಚಾರ್ಯರು ಸ್ವಾಗತಿಸಿದರು. ಗೌರವಾ ಪ್ರಾಧ್ಯಾಪಕ ವಿ|ಅನಿಲ್ ಜೋಶಿ ಧನ್ಯವಾದವನ್ನು ಸರ‍್ಪಿಸಿದರು. ವಿ| ಮಹೇಂದ್ರ ಸೋಮಯಾಜೀ ಕಾರ‍್ಯಕ್ರಮವನ್ನು ನಿರೂಪಿಸಿದರು. 
 
 
 
 
 
 
 
 
 
 
 

Leave a Reply