ಶ್ರೀ ವಿಠೋಭ ಗೋಪಾಲಕೃಷ್ಣ ಭಜನಾ ಮಂದಿರ, ಹೆಜಮಾಡಿಕೋಡಿಯಲ್ಲಿ ಜೀರ್ಣೋದ್ಧಾರ ಪುನಃಪ್ರತಿಷ್ಠಾ ಕಲಶೋತ್ಸವ

ಶ್ರೀ ವಿಠೋಭ ಗೋಪಾಲಕೃಷ್ಣ ಭಜನಾ ಮಂದಿರ, ಹೆಜಮಾಡಿಕೋಡಿಯಲ್ಲಿ ದಿನಾಂಕ: 04.05.2022 ರಿಂದ 05.05.2022 ರಂದು ನಡೆಯಲಿರುವ ಜೀರ್ಣೋದ್ಧಾರ ಪುನಃಪ್ರತಿಷ್ಠಾ ಕಲಶೋತ್ಸವ, ಮಹಾ
ಅನ್ನಸಂತರ್ಪಣೆ ಹಾಗೂ ಮಹಾಮಂಗಳೋತ್ಸವ ಕಾರ್ಯಕ್ರಮದ ಪ್ರಯುಕ್ತ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ
ಮೋಹನ್‌ದಾಸ್ ಹೆಜಮಾಡಿಯವರು, ಶ್ರೀ ವಿಠೋಭ ಗೋಪಾಲಕೃಷ್ಣ ಭಜನಾ ಮಂದಿರವು 104 ವರ್ಷಗಳ ಇತಿಹಾಸ ಹೊಂದಿದ್ದು, ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತೀ ಹಳೆಯ ಹಾಗೂ ಪ್ರತಿಷ್ಠಿತ ಭಜನಾಮಂದಿರಗಳಲ್ಲಿ ಒಂದಾಗಿದೆ. ಮಂದಿರದಲ್ಲಿ ಪ್ರತೀ ವರ್ಷವೂ ತಪ್ಪದೆ ಭಜನಾ ಮಂಗಳೋತ್ಸವ,
ಅನ್ನಸoತರ್ಪಣೆ, ಹೆಜಮಾಡಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ, ಇತರ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಇತರೆ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು. ಈ ಪುಣ್ಯ
ಕ್ಷೇತ್ರದಲ್ಲಿ ದಿ| ಶ್ರೀ ಶ್ರೀಧರ್ ಮಾಸ್ತರ್ ಮತ್ತು ಶ್ರೀಮತಿ ಶೈಲಜಾ ಅವರ ಪರವಾಗಿ ಶ್ರೀಮತಿ ಸಹನಾ ವೇಣುಗೋಪಾಲ್ ಮತ್ತು ಮಕ್ಕಳು ದಾನವಾಗಿ ನೀಡಿದ ಜಾಗದಲ್ಲಿ ಸುಮಾರು ರೂ.84 ಲಕ್ಷ ವೆಚ್ಚದಲ್ಲಿ
ಭವ್ಯ ಸುಂದರ ಭಜನಾ ಮಂದಿರವು, ಊರ-ಪರವೂರ ದಾನಿಗಳ ಸಹಕಾರ ಹಾಗೂ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮುತುವರ್ಜಿಯಿಂದ ಸರಕಾರದಿಂದ ಬಂದ ರೂ.10 ಲಕ್ಷ ನಿಧಿಯೊಂದಿಗೆ ಜೀರ್ಣೋದ್ಧಾರಗೊಂಡಿದೆ.
ಪುನರ್ ಪ್ರತಿಷ್ಠಾ ಕಲಶಾಭಿಷೇಕವು ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರ ಕನ್ಯಾಡಿ ಇವರ ದಿವ್ಯ ಉಪಸ್ಥಿತಿಯಲ್ಲಿ ಹೆಜಮಾಡಿ ಶ್ರೀ ಹರಿದಾಸ ಭಟ್ ಪೌರೋಹಿತ್ಯದಲ್ಲಿ ನಡೆಯಲಿರುವುದು. ದಿನಾಂಕ: 04.05.2022 ರಂದು ಸಂಜೆ ಗಂಟೆ 4.00ಕ್ಕೆ
ಸರಿಯಾಗಿ ಹೆಜಮಾಡಿ ಅಶ್ವತ್ಥಕಟ್ಡೆಯಿಂದ ಶ್ರೀ ವಿಠೋಭ ಗೋಪಾಲಕೃಷ್ಣನಕೃಷ್ಣಶಿಲೆಯ ಮೂರ್ತಿಯ
ಶೋಭಾಯಾತ್ರೆ ನಡೆಯಲಿದ್ದು, ದಿನಾಂಕ: 05.05.2022 ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ದಿನಾಂಕ: 05.05.2022  ರಂದು ಸಾಯಂಕಾಲ ನಡೆಯಲಿರುವ
ಧಾರ್ಮಿಕ ಸಭಾಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಚಿವರು ಕರ್ನಾಟಕ ಸರಕಾರ, ಶ್ರೀ ಲಾಲಾಜಿ ಮೆಂಡನ್ ಶಾಸಕರು ಕಾಪುಕ್ಷೇತ್ರ, ಶ್ರೀ ವಿನಯ್ ಕುಮಾರ್
ಸೊರಕೆಮಾಜಿ ಶಾಸಕರು ಕಾಪು ಕ್ಷೇತ್ರ, ಶ್ರೀ ಸುಮನ್ ತಲ್ವಾರ್ (ಬಹುಭಾಷಾ ಜನಪ್ರಿಯ ನಟ), ಶ್ರೀ
ಗುರ್ಮೆ ಸುರೇಶ್ ಶೆಟ್ಟಿಉದ್ಯಮಿ ಬಳ್ಳಾರಿ ಮತ್ತು ಸಮಾಜದ ಗಣ್ಯವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಎಲ್ಲಾ ಹಿಂದು ಸಮಾಜದ ಜನರು ಸಕ್ರಿಯರಾಗಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಿ.ಬಿ.ವೇಣುಗೋಪಾಲ್ ಸಂಚಾಲಕರು ಮತ್ತು ಕಾರ್ಯದರ್ಶಿ, ಶ್ರೀ ಉಮಾಶಂಕರ್ ಅಮೀನ್ ಅಧ್ಯಕ್ಷರು, ಶ್ರೀ ಹರೀಶ್ ಹೆಜಮಾಡಿ ಮುಂಬಯಿ, ಶ್ರೀ ಸಂಜೀವ ಕೋಟ್ಯಾನ್, ಶ್ರೀ ತಾರಾನಾಥ ಅಮೀನ್, ಶ್ರೀ ಭೋಜ ಡಿ. ಕೋಟ್ಯಾನ್, ಶ್ರೀ ರವಿ ಕೋಟ್ಯಾನ್, ಶ್ರೀ ವಿಠಲ್ ಪುತ್ರನ್, ಶ್ರೀ ಚೆನ್ನಪ್ಪ, ಶ್ರೀ ಹರೀಶ್, ಶ್ರೀ ರೋಹನ್, ಶ್ರೀ ಶ್ರೀಜಲ್, ಶ್ರೀ ಪ್ರಣಯ್, ಶ್ರೀ
ಅಮೃತ್, ಶ್ರೀ ಧೀರಜ್, ಶ್ರೀ ರಕಿತ್, ಶ್ರೀ ನಿಶ್ಚಲ್ ಸಭೆಯಲ್ಲಿ ಭಾಗವಹಿಸಿದರು.

 
 
 
 
 
 
 
 
 

Leave a Reply