Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಶ್ರೀರಾಘವೇಂದ್ರ ಮಠದಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ 4 ನೇ ವರ್ಷದ ಆರಾಧನೆ

ಉಡುಪಿ ಶ್ರೀಶಿರೂರು ಮಠದ ಯತಿಗಳಾದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 4 ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಮಠದಲ್ಲಿ ಶಾಸ್ತ್ರೋಕ್ತವಾಗಿ ವೈಭವದಿಂದ ಜರಗಿತು.

ಮುಂಜಾನೆ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಉದ್ದಿಶ್ಯ ಶ್ರೀಪಾದರ ಪೂರ್ವಾಶ್ರಮದ ಕುಟುಂಬಿಕರು ಹಾಗೂ ಭಕ್ತವೃಂದದ ವತಿಯಿಂದ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ವೇದಮೂರ್ತಿ ಶ್ರೀಸುಬ್ರಹ್ಮಣ್ಯ ಆಚಾರ ಮತ್ತು ಬಳಗದವರಿಂದ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು.

ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಮೃತ್ತಿಕಾವೃಂದಾವನಕ್ಕೆ ಶ್ರೀಕೃಷ್ಣಮುಖ್ಯ ಪ್ರಾಣದೇವರ ಹಾಗೂ ಶ್ರೀ ರಾಘವೇಂದ್ರಗುರುಗಳ ತೀರ್ಥ,ಪಂಚಾಮೃತ ಗಳಿಂದ ಅಭಿಷೇಕ ನಡೆಸಿ ನಂತರ ವಿಶೇಷ ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು.
ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ
ಪಿ.ಲಾತವ್ಯ ಆಚಾರ್ಯ ಪೂಜಾವಿಧಿಗಳನ್ನು ನಡೆಸಿದರು.

ಈ ಶುಭಸಂದರ್ಭದಲ್ಲಿ ಅನಂತೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇದವ್ಯಾಸ ಐತಾಳ್,ಶ್ರೀ ರಾಘವೇಂದ್ರ ಮಠ ಉಡುಪಿಯ ಅಪ್ಪಣ್ಣ ಆಚಾರ್,ಜಯತೀರ್ಥ ಆಚಾರ್,ಧರ್ಮದರ್ಶಿ ಹರಿಕೃಷ್ಣ ಪುನರೂರು,
ಸೊಂಡೂರು ಪ್ರಹ್ಲಾದ್ ಆಚಾರ್ಯ,ಸೊಂಡೂರು ಶ್ರೀನಿವಾಸ ಆಚಾರ್ಯ,
ರಾಜಗೋಪಾಲ್ ಆಚಾರ್ ಶ್ರೀರಂಗಂ,ಮಡಾಮಕ್ಕಿ ಅನಂತ ತಂತ್ರಿ,ಅಗ್ರಹಾರ ಲಕ್ಷ್ಮಿನಾರಾಯಣ ತಂತ್ರಿ, ಡಾ!!ವ್ಯಾಸರಾಜ ತಂತ್ರಿ ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ, ಶ್ರೀವತ್ಸ ರಾವ್,ಅಕ್ಷೋಭ್ಯ ಆಚಾರ್ಯ,ಅರ್ಜುನ ಆಚಾರ್ಯ,ಲಕ್ಷ್ಮೀಶ ಜೋಯಿಸ್ ಸಜೆ, ಕುಂದಾಪುರದ ಮಿನರ್ವ ಸಂಸ್ಥೆಯ ಶಂಕರನಾರಾಯಣ ಹೊಳ್ಳ,ರಾಜೇಂದ್ರ ಆಚಾರ್ಯಬಡಗುಬೆಟ್ಟು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶ್ರೀಕೇಮಾರು ಮಠದ ಸಾಂದಿಪಿನೀ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀಶಿರೂರು ಶ್ರೀಪಾದರ ಆರಾಧನಾ ಮಹೋತ್ಸವದ ನಿಮಿತ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದರು.

ಉಡುಪಿ ಶ್ರೀರಾಯರ ಮಠದಲ್ಲಿ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಶಿರೂರು ಶ್ರೀಪಾದರ ಊರಪರವೂರ ನೂರಾರು ಭಕ್ತರು ಆಗಮಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!