ಯಕ್ಷಗುರು ಕಾರಂತರ ಒಡನಾಡಿ ಸಂಜೀವ ಸುವರ್ಣರಿಗೆ ಗೆಳೆಯರ ಬಳಗದ ಕಾರಂತ ಪುರಸ್ಕಾರ ಪ್ರದಾನ

ಕೋಟ: ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ತನ್ನ ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಪಡಯುತ್ತಿರುವುದು ನನ್ನ ಜೀವನ ಸೌಭಾಗ್ಯ ಎಂದು ಯಕ್ಷಗುರು ಕಾರಂತ ಶಿಷ್ಯ ಬನ್ನಂಜೆ ಸಂಜೀವ ಸುವರ್ಣ ಹೇಳಿದ್ದಾರೆ.

ಶನಿವಾರ ಗಿರಿಜಾ ಕಲ್ಯಾಣಮಂಟಪದಲ್ಲಿ ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇದರ ಆಶ್ರಯದಲ್ಲಿ ಡಾ.ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ಗಾನ ನಮನ,ಕಾರಂತ ಸಂಸ್ಮರಣೆ, ಗೆಳೆಯರ ಬಳಗ ಕಾರಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಬನ್ನಂಜೆ ಸಂಜೀವ ಸುವರ್ಣ ಕಾರಂತ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಗೆಳೆಯರ ಬಳಗ ಕಾರ್ಕಡ ಆಯೋಜಿಸುವ ಕಾರಂತರ ಪುರಸ್ಕಾರ ಕಾರ್ಯಕ್ರಮ ಅರ್ಥಪೂರ್ಣ ಆದರೆ ಇತ್ತೀಚಿಗಿನ ದಿನಗಳಲ್ಲಿ ಕಾರಂತರ ವಿಚಾರಧಾರೆಯನ್ನು ಮರೆಮಾಚುವ ಕೆಲಸ ಕೆಲವು ಕಡೆಗಳಲ್ಲಿ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ.ಕಾರAತರ ಪ್ರಶಸ್ತಿಗಳು ಕಾರಂತರ ವ್ಯಕ್ತಿತ್ವವನ್ನು ಅನಾವರಗೈಯುವವರಿಗೆ ನೀಡಬೇಕು ಇಂಥಹ ಕಾರ್ಯದಲ್ಲಿ ಕಾರಂತ ಜೀವಿತ ಅವಧಿಯಿಂದ ಇಂದಿನವರೆಗೂ ಅರ್ಥಗರ್ಭಿತರಾಗಿ ಆಯೋಜಿಸುತ್ತಿರುವ ಇಂಥಹ ಸಂಘಟನೆಗಳ ಕಾರ್ಯ ಶ್ಲಾಘನೀಯ. ಕಾರಂತರು ಮಲ್ಲಿಗೆ ಹೂವಿನಂತೆ ಸೌಗಂಧಭರಿತವಾಗಿ ಪಸರಿಸಿದರೆ ಅದರ ಮಾಲಿಗೆ ಬಾಳೆ ಎಲೆಯ ಬಳ್ಳಿಯಂತೆ ಕಾರ್ಯನಿರ್ವಹಿಸಿದ ಹೆಮ್ಮೆ ನನಗಿದೆ ಎಂದು ಅಭಿಮಾನ ಪೂರಕವಾಗಿ ನುಡಿದರು.
ಇದೇ ವೇಳೆ ಗೆಳೆಯರ ಬಳಗ ಕಾರಂತ ಪುರಸ್ಕಾರವನ್ನು ಯಕ್ಷಗುರು ಕಾರಂತರ ಶಿಷ್ಯಬನ್ನಂಜೆ ಸಂಜೀವ ಸುವರ್ಣರಿಗೆ ಪ್ರದಾನಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನನೂರು ವಹಿಸಿದ್ದರು.

ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮೊಗೇರಿ ಜಯರಾಮ ಅಡಿಗ ಉದ್ಘಾಟಿಸಿದರು.
ಕಾರಂತರ ಭಾವಚಿತ್ರಕ್ಕೆ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಪುಷ್ಭನಮನ ಸಲ್ಲಿಸಿದರು. ಕಾರಂತ ಸಂಸ್ಮರಣೆಯನ್ನು ದೇವರಾಜು ಪ್ರಶಸ್ತಿ ಪುರಸ್ಕçತ ಡಾ.ಅಣ್ಣಯ್ಯ ಕುಲಾಲ್ ಗೈದರು. ಶುಭಾಶಂಸನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಗೈದರು ಮುಖ್ಯ ಅತಿಥಿಗಳಾಗಿ ವಿವೇಕ ವಿದ್ಯಾಸಂಸ್ಥೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ ರಮಾನಂದ್ ಭಟ್, ನಿವೃತ್ತ ಶಿಕ್ಷಕ ಚಲ್ಲಮಕ್ಕಿ ಗಣೇಶ್ ಜಿ,ಸಾಲಿಗ್ರಾಮ ಪ.ಪಂ ಅಧ್ಯಕ್ಷ ಸುಲತಾ ಹೆಗ್ಡೆ,ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ಸಾಲಿಗ್ರಾಮ ಪ.ಪಂ ಸದಸ್ಯರಾದ ರಾಜು ಪೂಜಾರಿ,ಕಲಾ ಸಾಹಿತಿ ಜನಾರ್ದನ ಹಂದೆ ಉಪಸ್ಥಿತರಿದ್ದರು. ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಪ್ರಾಸ್ತಾವನೆಗೈದು ಸ್ವಾಗತಿಸಿದರು.ಬಳಗದ ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.ಸನ್ಮಾನಪತ್ರವನ್ನು ಂಜುನಾಥ ಉಪಾಧ್ಯ ವಾಚಿಸಿದರು.ಪಶಸ್ತಿ ಪುರಸ್ಕçತ ಕುರಿತು ಕಲಾ ಸಾಹಿತಿ ಜನಾರ್ದನ ಹಂದೆ ಗಾನವಾಚನಗೈದರು. ಬಳಗದ ಕಾರ್ಯದರ್ಶಿ ಶೀನ ವಂದಿಸಿದರು.ಬಳಗದ ತಮ್ಮಯ್ಯ,ಚಂದ್ರಕಾoತ್ ನಾಯರಿ ಸಹಕರಿಸಿದರು.

 
 
 
 
 
 
 
 
 
 
 

Leave a Reply