‘ಸಾಮರಸ್ಯ ಗತಿವಿಧಿ’ ವತಿಯಿಂದ “ತುಡರ್” ಕಾರ್ಯಕ್ರಮ

ಕಾರ್ಕಳದ ರಾಘವೇಂದ್ರ ಮಠದಿಂದ ಭಜನೆ ತಂಡದೊಂದಿಗೆ ಹೊರಟ ಮೆರವಣಿಗೆಯು ಮರಿಣಾಪುರ ಕಾಲೋನಿಗೆ ತಲುಪಿ ಮನೆಮನೆಗೆ ಭಜನೆಯನ್ನು ಮಾಡಿ ದೀಪಗಳನ್ನು ಉರಿಸುವ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕವಾದ ‘ಸಾಮರಸ್ಯ ಗತಿವಿಧಿ’ ಉಡುಪಿ ಜಿಲ್ಲೆ ಸಂಯೋಜನೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ಸಮಾಜದೊಟ್ಟಿಗೆ ದೀಪಾವಳಿಯ “ತುಡರ್” ಕಾರ್ಯಕ್ರಮ ಜರಗಿತು. 
 ಸಂಘದ ಹಿರಿಯ ಪ್ರಮುಖರಾಗಿರುವ ವೆಂಕಟರಮಣ ಪ್ರಸಾದ್, ಕಾರ್ಕಳ ಸಂಘ ಸಂಚಾಲಕರಾಗಿರುವ ಉದಯ ಶೈನಯೀ ಸನಾತನ ಧರ್ಮದ ಉಳಿವು ಅಳಿವಿನ ವಿಚಾರದಲ್ಲಿ ನಾವು ಹೇಗೆ ನಮ್ಮ ಆಚರಣೆಗಳು, ಹಬ್ಬಗಳನ್ನು ತಿಳಿದು ಮಾಡಬೇಕು ಎಂದು ಧರ್ಮಾಚರಣೆಗಳ ಬಗ್ಗೆ ತಿಳಿಹೇಳಿದರು. 
ಕಾರ್ಯಕ್ರಮದಲ್ಲಿ ಕಾಲೋನಿಯ ಮುಖಂಡರಾಗಿರುವ ಗೋವಿಂದ ಅವರಿಂದ ತುಳಸಿ ಪೂಜೆಯನ್ನು ಮಾಡಿ ಪ್ರಸಾದವನ್ನು ಹಂಚಲಾಯಿತು. ಸಿಡಿಮದ್ದು  ಸಿಡಿಸಿ ಸಂಭ್ರಮಿಸಲಾಯಿತು.   
ವಾರ್ಡ್  ಕೌನ್ಸಿಲರ್ ಸೋಮಣ್ಣ, ಕಾಲೋನಿಯ ಸದಸ್ಯರು ಹಾಗು ಸಾಮರಸ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು. ಕುಟುಂಬದ ಪ್ರಭೋದಿನಿ ಪ್ರಮುಖ ಆಗಿರುವ ಹರೀಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.  ಉಡುಪಿ ಸಾಮರಸ್ಯ ಕಾರ್ಯಕರ್ತೆ ರಮಿತ ಶೈಲೇಂದ್ರ ಅವರು ಪ್ರಸ್ತಾಪಿಸಿದರು. 
 
 
 
 
 
 
 
 
 
 
 

Leave a Reply