ಸಾಲಿಗ್ರಾಮ- ಫುಟ್‌ವೇರ್ ಅಂಗಡಿ ಹೆಸರು ತೆಗೆಯುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹ ಮನವಿ

ಕೋಟ: ಸಾಲಿಗ್ರಾಮದ ಮುಖ್ಯಪೇಟೆಯಲ್ಲಿ ಹಿಂದೂ ದೇವರುಗಳ ಹಾಗೂ ಪ್ರಸುದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿದ್ದ ಸಾಲಿಗ್ರಾಮ ಪುಟ್ ವೇರ್ ಹೆಸರು ಬದಲಾಯಿಸುವಂತೆ ಅದರ ವಿರುದ್ಧ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಹಾಗೂ ಮುಖ್ಯಾಧಿಕಾರಿ ಶಿವ ನಾಯ್ಕ್ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿ.ಜಾ.ವೇ ಜಿಲ್ಲಾ ಮುಖಂಡ ಶಂಕರ್ ಕೋಟ ಮಾತನಾಡಿ ಸಾಲಿಗ್ರಾಮ ಎನ್ನುವ ಕ್ಷೇತ್ರ ಪಾವಿತ್ರತೆ ಹೊಂದಿದ ಕ್ಷೇತ್ರವಾಗಿದೆ ಇದರ ಹೆಸರನ್ನು ಇಟ್ಟುಕೊಂಡು ವ್ಯವಹರಿಸುವ ಜೊತೆಗೆ ಹಿಜಾಬ್ ಸಂಬAಧಿಸಿದ ಕೋಟ್೯ ತೀರ್ಪು ಉಲ್ಲಂಗಿಸಿ ಬಂದ್ ಮಾಡಿದ್ದಾರೆ. ಹಾಗಾದರೆ ಅಂತಹ ಸಮುದಾಯಕ್ಕೆ ನಮ್ಮ ಪವಿತ್ರ ಕ್ಷೇತ್ರ ಅದರ ಹೆಸರನ್ನು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸಗಿದ್ದಾರೆ ಇಂತಹ ವ್ಯಕ್ತಿಯ ವ್ಯಾವಹಾರಿಕಾ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣಪಂಚಾಯತ್ ಮನವಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕೋಟ ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಅಧ್ಯಕ್ಷ ಪ್ರಶಾಂತ್ ಮಟಪಾಡಿ,ಪ್ರದಾನಕಾರ್ಯದರ್ಶಿ ಸಂದೀಪ್ ಕದ್ರಿಕಟ್ಟು, ಗೌರವಾಧ್ಯಕ್ಷ ಸಮತಾ ಸುರೇಶ್ , ಸಾಲಿಗ್ರಾಮ ವಲಯ ಅಧ್ಯಕ್ಷ ಗಿರೀಶ್ ಆಚಾರ್ಯ ,ರತ್ನಾಕರ ಬಾರಿಕೆರೆ ನಾಗೇಶ ಪೂಜಾರಿ ಆನಂದ್ ಟೈಲರ್ ಸಾಲಿಗ್ರಾಮ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯೇಂದ್ರ ಪೂಜಾರಿ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಕರುಣಾಕರ ಪೂಜಾರಿ ದೇವೇಂದ್ರ ದೇವಾಡಿಗ ಸಂಜೀವ ದೇವಾಡಿಗ ಅಶೋಕ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು

ಸಾಲಿಗ್ರಾಮದ ಮುಖ್ಯಪೇಟೆಯಲ್ಲಿ ಹಿಂದೂ ದೇವರುಗಳ ಹಾಗೂ ಪ್ರಸುದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿದ್ದ ಸಾಲಿಗ್ರಾಮ ಪುಟ್ ವೇರ್ ಹೆಸರು ಬದಲಾಯಿಸುವಂತೆ ಅದರ ವಿರುದ್ಧ ಸಾಲಿಗ್ರಾಮ ಪಟ್ಟಣಪಂಚಾಯತ್ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಮುಖಂಡ ಶಂಕರ್ ಕೋಟ ನೇತ್ರತ್ವದಲ್ಲಿ ಮನವಿ ನೀಡಿತು. ಕೋಟ ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಅಧ್ಯಕ್ಷ ಪ್ರಶಾಂತ್ ಮಟಪಾಡಿ,ಪ್ರದಾನಕಾರ್ಯದರ್ಶಿ ಸಂದೀಪ್ ಕದ್ರಿಕಟ್ಟು, ಗೌರವಾಧ್ಯಕ್ಷ ಸಮತಾ ಸುರೇಶ್ , ಸಾಲಿಗ್ರಾಮ ವಲಯ ಅಧ್ಯಕ್ಷ ಗಿರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply