ತೆರಿಗೆ ವಂಚಿಸಿ ಸರಕು ಸಾಗಾಟ ಮಾಡುತ್ತಿದ್ದ ಸಾಗಣೆದಾರನಿಂದ ದಂಡ ವಸೂಲಿ

ಮಂಗಳೂರು: ಕಳೆದ ಐದುವರೆ ತಿಂಗಳ ಹಿಂದೆ ಸೇವಾ ತೆರಿಗೆಯನ್ನು ವಂಚಿಸಿ ದ.ಕ ದಿಂದ ಉತ್ತರಪ್ರದೇಶಕ್ಕೆ ಅಡಿಕೆ ಸರಕು ಸಾಗಾಟ ಮಾಡುತ್ತಿದ್ದ ಸಾಗಣೆದಾರನಿಂದ  ವಾಣಿಜ್ಯ ತೆರಿಗೆ ಕಚೇರಿಯು ಸೇವಾ ತೆರಿಗೆ ಮತ್ತು ದಂಡ ವಸೂಲಿ ಮಾಡಿದೆ. ಮಂಗಳೂರಿನ ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಕಚೇರಿಯು 53.10ಲಕ್ಷ ರೂ. ಸೇವಾ ತೆರಿಗೆ ಮತ್ತು ದಂಡ ವಸೂಲಿ ಮಾಡಿದೆ. ಸೇವಾ ತೆರಿಗೆ ಮತ್ತು ದಂಡ ವಸೂಲಿ ಮಾಡಿದೆ.

ಮೇ 23ರಂದು ಉಡುಪಿ ಮಂಗಳೂರು ಪಶ್ಚಿಮ ವಲಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಜಿಲ್ಲೆಯ ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆ ಎಂಬಲ್ಲಿ ರಸ್ತೆ ಜಾಗೃತಿ ಕಾರ್ಯ ನಡೆಸುತ್ತಿದ್ದಾಗ ಮಧ್ಯಪ್ರದೇಶ ನೋಂದಣಿ ಸಂಖ್ಯೆಯ ಟ್ರಕ್‌ನಲ್ಲಿ 380 ಚೀಲ ಅಂದರೆ 24.7 ಟನ್ ತೂಕದ ಅಡಿಕೆಯನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಸರಕು ಸಾಗಣೆದಾರರು ಕರ್ನಾಟಕದಲ್ಲಿ ಅಡಿಕೆ ಸರಕನ್ನು ಪಡೆದು, ಅದನ್ನು ಕೇರಳದ ಮಾರಾಟಗಾರರಿಗೆ ನಕಲಿ ದಾಖಲೆಗಳೊಂದಿಗೆ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿತ್ತು.

ಇನ್ನು ಮಂಗಳೂರು ಪಶ್ಚಿಮ ವಲಯ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಉದಯಶಂಕರ್ ಈ ಬಗ್ಗೆ ಮಾಹಿತಿ ನೀಡಿ ಸರಕು ಸಾಗಣೆದಾರ ಪುತ್ತೂರು ಯೂನಿಯನ್ ಕಾರ್ಗೋ ಮೂವರ್ಸ್‌ ಅವರ ವಿರುದ್ಧ ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 129(1)(b) ರಡಿಯಲ್ಲಿ ಆದೇಶ ಹೊರಡಿಸಿ, ಒಟ್ಟು 53,10,500 ರೂ. ಸೇವಾ ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಲಾಗಿದೆ ಎಂದರು.

 
 
 
 
 
 
 
 
 
 
 

Leave a Reply