ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ

ಉಡುಪಿ: ಉದ್ಯೋಗ ಕೊಡಿಸುವುದಾಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಿಯ ಬಂಧನ​ ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿ ಸಾರ್ವಜನಿಕರಿಗೆ ಉದ್ಯೋಗ ಕೊಡುವುದಾಗಿ ನಂಬಿಸಿ ಹಣ ಮತ್ತು ದಾಖಲೆ ಪತ್ರಗಳನ್ನು ಪಡೆದು ಉದ್ಯೋಗ ನೀಡದ ವಂಚಿಸಿದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ

ಬಂಧಿತ ಆರೋಪಿಯನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ.​ ಬಂಧಿತ ಆರೋಪಿಯು ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡಿಕೊಂಡಿದ್ದ ಮಥಾಯಿಸ್ ಎಂಬವರಿಂದ ಅಕ್ಟೋಬರ್ 25ರಂದು ತಾನು ಕೊಂಕಣ ರೈಲ್ವೆ ಇಲಾಖೆ ಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿ ಮಥಾಯಿಸ್ ಅವರಿಗೆ ಉದ್ಯೋಗ ಕೊಡುವುದಾಗಿ ನಂಬಿಸಿ ಪಿರ್ಯಾದಾರಿಂದ 20,000 ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹಾಗೇಯೇ ಸಹ ,ಪರ್ಕಳದ ವನಿತಾರವರಿಂದ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ನೀಡಿ ,ಉದ್ಯೋಗ ಕೊಡಿಸದೆ ಮೋಸ ಮಾಡಿರುತ್ತಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ , ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು.ಇ ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿ ಯನ್ನು ನವೆಂಬರ್ 10 ರಂದು ಬಂಧಿಸಿಲಾಗಿದೆ. ಅರೋಪಿಯನ್ನು ಬಂದಿಸುವಲ್ಲಿ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿಯವರು ಸಹಕರಿಸಿರುತ್ತಾರೆ

ಈ ಕಾರ್ಯಚಾರಣೆಯು ಎನ್. ವಿಷ್ಣುವರ್ಧನ್, ಐ.ಪಿ.ಎಸ್,  ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ​ಇವರ ಆದೇಶದಂತೆ, ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, , ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಉಪ ವಿಭಾಗರವರ ಮಾರ್ಗದರ್ಶನ ದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ , ಉಡುಪಿ ನಗರ ಠಾಣೆಯ ಪಿಎಸ್ಐಗಳಾದ ಸಕ್ತಿವೇಲು.ಇ, ಮತ್ತು ವಾಸಪ್ಪ ನಾಯ್ಕ, ಸಿಬ್ಬಂದಿಯವರಾದ ಎಎಸ್ಐ ಹರೀಶ್, ಲೋಕೇಶ್,  ರಿಯಾಝ್,​ ​ಅಹ್ಮದ್, ಹರ್ಷ, ಉಮೇಶ್, ಇಮ್ರಾನ್, ಸಂತೋಷ್ ರಾಠೋಡ್,  ವಿಶ್ವನಾಥ ಶೆಟ್ಟಿ , ಚಾಲಕ ರಾಘವೇಂದ್ರ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

 
 
 
 
 
 
 
 
 
 
 

Leave a Reply