ಮೋಟಾರ್ ರಿವೈಡಿಂಗ್ ತರಬೇತಿ ಉದ್ಘಾಟನೆ

:ದೇಶದ ಆರ್ಥಿಕ ಅಭಿವೃದ್ಧಿ ಯುವಜನ ಸ್ವಂತ ಉದ್ಯೋಗ ಮಾಡಿದರೆ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ತನ್ನದೇ ಆದ ಸ್ವಂತ ಉದ್ಯೋಗ ಮಾಡಿದರೆ ಆದಾಯ ಹೆಚ್ಚು ಆಗಲು ಸಾಧ್ಯ ಎಂದು ಉಡುಪಿ ಶಾಸಕರಾದ ಶ್ರೀಯುತ ಯಶಪಾಲ್ ಸುವರ್ಣ ಅಭಿ ಪ್ರಾಯ ಪಟ್ಟರು.

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆಯುವ *ಮೋಟಾರ್‌ ರಿವೈಡಿಂಗ್* ತರಬೇತಿಯನ್ನು ದೀಪ ಬೆಳಗಿಸಿ, ಮಾತನಾಡಿ *ಪರಮ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು* ನಡೆಸುವ ಕೆಲಸ ಕಾರ್ಯಗಳು ಸರಕಾರಕ್ಕೆ ಮಾದರಿಯಾಗಿದೆ ಇದರ ಪ್ರಯೋಜನವನ್ನು ಪಡೆದು ಯುವ ಜನರು ಸಮಾಜಮುಖಿ ಕೆಲಸದ ಜೊತೆ ಸ್ವಂತ ಉದ್ಯೋಗ ಮಾಡಿ ಉದ್ಯಮಿಗಳಾಗಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ *ಲಕ್ಷ್ಮೀಶ ಎ.ಜಿ* ಮಾತನಾಡಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದುಪಯೋಗ ಪಡೆದು ಉದ್ಯಮಿ ಗಳಾಗಿ ದೇಶದ ಅಭಿವೃದ್ಧಿ ಯಲ್ಲಿ ಭಾಗವಹಿಸಿ ಎಂದರು ವೇದಿಕೆಯಲ್ಲಿ ರುಡ್ ಸೆಟ್ ಸಂಸ್ಥೆ ಹಳೆ ವಿದ್ಯಾರ್ಥಿ, ಉದ್ಯಮಿ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷರಾದ *ಮಹೇಶ ಕುಮಾರ್ ಮಲ್ಪೆ* ಹಾಗೂ ಉದ್ಯಮಿ ಆಸರೆಯ ಮಾಜಿ ಕಾರ್ಯದರ್ಶಿ *ಬನ್ನಾಡಿ ಕುಶ* ಉಪಸ್ಥಿತ ರಿದ್ದರು. ಸ್ಥಳೀಯರಾದ *ಬೈಕಾಡಿ ಆಟೋ ಚಾಲಕ ರವಿ ಕುಮಾರ್* ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ಆಗಮಿಸಿರುವ ಶಾಸಕರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ *ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್* ಸ್ವಾಗತಿಸಿ, ತರಬೇತಿ ಯ ಮುನ್ನೋಟ ವನ್ನು ನೀಡಿ, ನಿರೂಪಿಸಿದರು *ಉಪನ್ಯಾಸಕ ರಾದ ಸಂತೋಷ ಶೆಟ್ಟಿ ವಂದಿಸಿದರು.

*ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸಯ್ಯ* ರವಿ ಸಾಲ್ಯಾನ್* ಹಾಜರಿದ್ದರು.

 
 
 
 
 
 
 
 
 
 
 

Leave a Reply