ರೋಟರಿಯಿಂದ ಕಲಿಕಾ ನೂನ್ಯತೆ ಗುರುತಿಸುವಿಕೆ ಬಗ್ಗೆ ಕಾರ್ಯಾಗಾರ

ರೋಟರಿಯಿಂದ ಉಡುಪಿ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಕಲಿಕಾ ನ್ಯೂನತೆಗಳನ್ನು ಗುರುತಿಸುವಿಕೆ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಿದ್ದು ಅದರ ಉದ್ಘಾಟನಾ ಸಮಾರಂಭವು ಉಡುಪಿಯ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನಡೆಯಿತು. ಪ್ರಾರಂಭದಲ್ಲಿ ರೋಟರಿಜಿಲ್ಲಾ ಯೋಜನಾ ಸಭಾಪತಿ ರೋ. ಎಸ್.ಎ.ರೆಹಮಾನ್ ಎಲ್ಲರನ್ನು ಸ್ವಾಗತಿಸಿ ದ ಬಳಿಕ ಡಯಟ್ ಉಪಪ್ರಾಂಶುಪಾಲ ಮತ್ತು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಅಶೋಕ ಕಾಮತ್ ಅವರು ಕಾರ್ಯಾಗಾರದ ಉದ್ಧೇಶವನ್ನು ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನಿರ್ದೇಶಕ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ, ಶ್ರೀ ಶಿವರಾಜರವರು ಉದ್ಘಾಟಿಸಿ ಸರಕಾರ ಇಂತಹ ಕಲಿಕಾ ನ್ಯೂನ್ಯತೆಯಿರುವ ಮಕ್ಕಳನ್ನು ಗುರುತಿಸಿ ಅವರನ್ನು ಇತರ ಮಕ್ಕಳಂತೆ ವಿದ್ಯಾಭ್ಯಾಸ ಮುಂದುವರಿಸಲು ವಿವಿದ ಯೋಜನೆಗಳನ್ನು ಹಾಕಿದ್ದು ಅದರಲ್ಲಿ ರೋಟರಿ ಯಂತಹ ಸ್ವಯಂಸೇವಾಸಂಸ್ಥೆಗಳು ಜತೆಗೂಡಿದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದು ಎಂದು ಹೇಳಿ ಈ ಬಗ್ಗೆ ಮುತುವರ್ಜಿವಹಿಸಿದ್ದಕ್ಕೆ ರೋಟರಿಯನ್ನು ಅಭಿನಂದಿಸಿದರು. ರೋಟರಿ ಗವರ್ನರ್ ರೋ.ಡಾ.ಜಯಗೌರಿಯವರು ಮಾತಾಡುತ್ತಾ, ಒಬ್ಬ ಮಕ್ಕಳ ತಜ್ಞೆಯಾಗಿ ಇಂತಹ ಸಮಸ್ಯೆ ಯಿರುವ ಮಕ್ಕಳ ಅನುಭವದಿಂದಾಗಿ ಜನಸಾಮಾನ್ಯರಿಗೆ ಈ ಸಮಸ್ಯೆ ಗಳ ಬಗ್ಗೆ ಅರಿವು ಮೂಡಿಸಿ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದಲ್ಲಿ ತುಂಬಾ ಉಪಯೋಗವಾಗುವುದು. ಈ ಬಗ್ಗೆ ರೋಟರಿಯ ಪ್ರಯತ್ನಕ್ಕೆ ಸರಕಾರದ ಶಿಕ್ಷಣ ಇಲಾಖೆ ಸಹಕರಿಸುತ್ತಿದ್ದು, ಇದರಿಂದ ಮಕ್ಕಳಿಗೆ ಉಪಯೋಗ ವಾಗುವ ಇಂತಹ ಕಾರ್ಯಾಗಾರವನ್ನು ಎರ್ಪಡಿಸಿದ್ದು , ಬಾಗವಹಿಸಿದ ಎಲ್ಲರೂ ಅದರ ಸಂಪೂರ್ಣ ಉಪಯೋಗ ಪಡೆಯಬೇಕೆಂದು ಕರೆನೀಡಿದರು. ಕೊನೆಯಲ್ಲಿ ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯರು ದನ್ಯವಾದ ಸಮರ್ಪಿಸಿದರು. ಜಿಲ್ಲಾ ಯೋಜನ ಉಪಸಭಾಪತಿ ರೋ.ಚಂದ್ರ ನಾಯ್ಕ ಅವರು ಕಾರ್ಯಕ್ರಮ ನಿರ್ವಹಣೆಮಾಡಿದರು. ಕಾರ್ಯಕ್ರಮ ಸಂಯೋಜನೆ ಮಾಡಿದ ರೋಟರಿ ಕ್ಲಬ್ ನ ಅಧ್ಯಕ್ಷರುಗಳಾದ ರೋ. ಸುಬ್ರಹ್ಮಣ್ಯ ಕಾರಂತ, ರೋ.ರೇಣು ಜಯರಾಂ ಮತ್ತು ರೋ.ನಳೀನಿ ಶೆಟ್ಟಿ ಯವರು ಉಪಸ್ಥಿತರಿದ್ದರು. ನಂತರ ನಡೆದ ಕಾರ್ಯಗಾರದಲ್ಲಿ ಬೆಂಗಳೂರಿನಿಂದ ಆಗಮಿಸಿದ ಸಂಪನ್ಮೂಲ ಅತಿಥಿಗಳಾದ ಶೀಮತಿ ಸೀತಾಕೃಷ್ಣಮೂರ್ತಿ, ಶ್ರೀಮತಿ ಕೃಷ್ಣ ರಂಗನಾಥನ್ ಮತ್ತು ಶ್ರೀಮತಿ ಸುಮತಿ ರಾಮ್ ಜಿ ಯವರು ಅತ್ಯುತ್ತಮ ವಾಗಿ ಕಾರ್ಯಗಾರವನ್ನು ನಡೆಸಿ ಕೊಟ್ಟರು. ಕೊನೆಯಲ್ಲಿ ಜಿಲ್ಲಾಯೋಜನಾ ಜಂಟಿ ಕಾರ್ಯದರ್ಶಿ ರೋ.ರಾಜವರ್ಮ ಅರಿಗ, ರೋಟರಿ ಜಿಲ್ಲಾ ಕಾರ್ಯದರ್ಶಿ ರೋ.ಸುಬ್ರಹ್ಮಣ್ಯ ಬಾಸ್ರಿ ಮತ್ತು ವಲಯ ಸಂಯೋಜಕ ರೋ.ಗಣೇಶ್ ಕಿಣಿ ಅವರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿ ದರು.ಕಾರ್ಯಕ್ರಮ ದಲ್ಲಿ ವಲಯಕಾರ್ಯದರ್ಶಿ ರೋ. ಜನಾರ್ದನ ಭಟ್, ವಲಯ ಸೇನಾನಿ ರೋ.ಬಾಲಕೃಷ್ಣ ಕುಮಾರ್, ರೋ. ದಯಾನಂದ ನಾಯಕ್, ರೋ. ಗುರುರಾಜ್ ಭಟ್, ರೋ. ದೀಪಾಭಂಡಾರಿ, ರೋ. ವನಿತ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply