ಮುದ್ದು ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ

ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ, ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಯುವಕ ಯುವತಿಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಸಾಣೂರು ಶಿವರಾಮ ರೈ ಕಲಾ ವೇದಿಕೆಯಲ್ಲಿ ನಡೆಯಿತು ಕಾರ್ಯಕ್ರಮವನ್ನು ಶ್ರೀಮತಿ ಸೌಮ್ಯ ಪ್ರವೀಣ್ ಶೆಟ್ಟಿಯವರು ಉದ್ಘಾಟಸಿ ಶುಭ ಹಾರೈಸಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಕರುಣಾಕರ್ ಎಸ್ ಕೋಟ್ಯಾನ್ ಮಾತನಾಡಿ ಸಾಣೂರು ಯುವಕ ಮಂಡಲವು ತನ್ನ ಒಂದಕ್ಕೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮುದ್ದು ಕೃಷ್ಣ ಸ್ಪರ್ಧೆಯ ಮೂಲಕ ಶ್ರೀ ಕೃಷ್ಣ ಬಾಲ್ಯದ ತುಂಟಾಟಗಳನ್ನು ಮುದ್ದು ಮಕ್ಕಳ ಮೂಲಕ ಆನಂದಿಸಲು ವೇದಿಕೆ ಎಂದರು ಅಧ್ಯಕ್ಷತೆ ವಹಿಸಿದ್ದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು 1 ಇಲ್ಲಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಉಷಾ ತಾಮನ್ ಕರ್ ಮುದ್ದು ಮಕ್ಕಳಿಗೆ ಶುಭ ಹಾರೈಸಿದರು ವೇದಿಕೆಯಲ್ಲಿ ಶ್ರೀ ಸುರೇಂದ್ರ ಆಚಾರ್ಯ, ಶ್ರೀ ವಿಶ್ವನಾಥ ನಾರಾವಿ, ಶ್ರೀ ಹರೀಶ್ ರಾವ್ ವಿಶ್ವನಾಥ್ ಶೆಟ್ಟಿ, ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಶ್ರೀ ಪ್ರವೀಣ್ ಶೆಟ್ಟಿ, ಶ್ರೀ ಮಹೇಶ್ ಕುಮಾರ್, ಶ್ರೀ ಜಗದೀಶ್ ಕುಮಾರ್, ಶ್ರೀ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು ಒಟ್ಟು 36 ಪುಟಾಣಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಸರ್ವರನ್ನೂ ಸ್ವಾಗತಿಸಿದರು ಚಂದ್ರಹಾಸ್ ಪೂಜಾರಿ ಮತ್ತು ಪ್ರಕಾಶ್ ರಾವ್ ಬಹುಮಾನಗಳ ಪಟ್ಟಿ ವಾಚಿಸಿದರು ಪ್ರಸಾದ್ ಶೆಟ್ಟಿ ವಂದನಾರ್ಪಣೆಗೈದರು ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply