ಶಿರ್ವ ಮಹಿಳಾ ಮಂಡಲ -ಶಾಲಾ ಮಕ್ಕಳಿಗೆ ಗೀತಾ ಗಾಯನ ಸ್ಪರ್ಧೆ

ವಜ್ರ ಮಹೋತ್ಸವದ ಹೊಸ್ತಿಲಲ್ಲಿರುವ ಶಿರ್ವ ಮಹಿಳಾ ಮಂಡಲ (ರಿ) ಇದರ ತಿಂಗಳ ಕಾರ್ಯಕ್ರಮ ಸರಣಿಯಡಿ ಆಗಸ್ಟ್ ತಿಂಗಳ ಕಾರ್ಯಕ್ರಮವಾಗಿ ಸ್ಥಳೀಯ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಮೂಹಿಕ ಗೀತಾ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ಒಟ್ಟು ಮೂರು ವಿಭಾಗಗಳಲ್ಲಿ ನಡೆದ‌ ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ಸ್ವೀಕರಿಸಿದರು.ಆನಂತರ ಮಾತನಾಡಿದ ಶ್ರೀಮತಿ ಬಬಿತಾ ಜಗದೀಶ್ ಅರಸ ಅವರು ಪ್ರತೀಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಒಂದೊಂದು ಪ್ರತಿಭೆಗಳಿರುತ್ತವೆ.ಆ ಸುಪ್ತ ಪ್ರತಿಭೆಗಳು ಹೊರಬರಬೇಕಾದರೆ ಇಂತಹ ಸ್ಪರ್ಧೆಗಳು ಅಗತ್ಯವಿದೆ.ಸ್ಪರ್ಧೆ ಕೇವಲ ಬಹುಮಾನಕ್ಕಾಗಿ ಇರಬಾರದು.ಭಾಗವಹಿಸುವಿಕೆ ಮುಖ್ಯವಾದಾಗ ಮಾತ್ರ ಆ ಸ್ಪರ್ಧೆಗೊಂದು ಅರ್ಥ ಬರುತ್ತದೆ.ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು.ಎಂದರು.ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಲಿನಿ ಶೆಟ್ಟಿ ಅವರು ಸರ್ವರನ್ನೂ ಸ್ವಾಗತಿಸಿದರು.ಮಹಿಳಾ ಮಂಡಲದ ಕಾರ್ಯದರ್ಶಿ ಡಾ.ಸ್ಪೂರ್ತಿ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 
 
 
 
 
 
 
 
 
 
 

Leave a Reply