ಯುವಕ ಮಂಡಲ ಪೆರಂಪಳ್ಳಿ ಮತ್ತು ರೋಟರಿ ರಾಯಲ್: ಮುದ್ದು ಕೃಷ್ಣ ಸ್ಪರ್ಧೆ

ಯುವಕ ಮಂಡಲ ಪೆರಂಪಳ್ಳಿ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಇವರ ಜಂಟಿ ಆಶ್ರಯದಲ್ಲಿ ಪೆರಂಪಳ್ಳಿಯ ದಿ. ಮಂಜುನಾಥ್ ಶಿವತ್ತಾಯ ರಂಗಮಂದಿರದಲ್ಲಿ ಚಿಣ್ಣರಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಏರ‍್ಪಡಿಸಲಾಯಿತು. ಕರ‍್ಯಕ್ರಮವನ್ನು ರೋಟರಿ ವಲಯ ೪ ರ ಸಹಾಯಕ ಗರ‍್ನರ್ ರಾಮಚಂದ್ರ ಉಪಾದ್ಯಾಯ ರವರು ಉದ್ಘಾಟಿಸಿ ಮಕ್ಕಳಲ್ಲಿ ಪ್ರತಿಭೆ ಹುಟ್ಟಿನಿಂದಲೇ ಹಾಸು ಹೊಕ್ಕಾಗಿದ್ದು ಅದನ್ನು ಬೆಳೆಸುವ ಜವಾಬ್ದಾರಿ ಹೆತ್ತವರು ಮತ್ತು ಸಂಘ ಸಂಸ್ಥೆಗಳದ್ದಾಗಿದ್ದು ಇಂತಹ ಸ್ರ‍್ಧೆಗಳನ್ನು ಆಯೋಜಿಸುವುದರಿಂದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಲು ಅವಕಾಶ ದೊರಕುತ್ತದೆ ಎಂದು ಹೇಳಿದರು . ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಣೆ ಮಾಡಿದ ರಾಯಲ್ ಅಧ್ಯಕ್ಷ ಡಾ. ಬಾಲಕೃಷ್ಣ ಮದ್ದೋಡಿಯವರು ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸುವಲ್ಲಿ ಹೆತ್ತವರ ಪಾತ್ರದ ಬಗ್ಗೆ ವಿಶೇಷ ಗಮನ ಸೆಳೆದರು. ಯುವಕ ಮಂಡಲದ ಅಧ್ಯಕ್ಷ ಡೆನಿಸ್ ಮಸ್ಕರೇನಸ್ ನೇತೃತ್ವದಲ್ಲಿ ಕರ‍್ಯಕ್ರಮ ಸಂಘಟಿಸಲಾಯಿತು.
ಮೂರು ರ‍್ಷದ ವರೆಗಿನ ಮಕ್ಕಳ ವಿಭಾಗದಲ್ಲಿ ಪ್ರಾಚಿ, ಸನ್ನಿದಿ ಪೆರಂಪಳ್ಳಿ, ಪ್ರನುಷ್ ಹಾಗು ಮೂರರಿಂದ ಆರು ರ‍್ಷಗಳ ಮಕ್ಕಳ ವಿಭಾಗದಲ್ಲಿ ಆಯುಷ್, ನಮ್ಯಶ್ರೀ, ಸಾಮ್ರಾಟ್ ಪ್ರಥಮ ಮೂರು ಸ್ಥಾನಗಳನ್ನು ಗಳಿಸಿದರು. ಸ್ರ‍್ಧೆಯ ನರ‍್ಣಾಯಕರಾಗಿ ರೂಪಶ್ರೀ ರತ್ನಾಕರ್, ಶುಭ ಬಾಸ್ರಿ, ಮೋಹಿನಿ ಶಿವತ್ತಾಯ ಕರ‍್ಯ ನರ‍್ವಹಿಸಿದರು.

ಯುವಕ ಮಂಡಲದ ಗೌರವಾಧ್ಯಕ್ಷರಾದ ಗಂಗಾಧರ್ ಆಚರ‍್ಯ, ಕೃಷಿ ಸಂಘದ ಅಧ್ಯಕ್ಷರಾದ ರವೀಂದ್ರ ಪೂಜಾರಿ, ನಾರಾಯಣ ಗುರು ಸಂಘದ ಅಧ್ಯಕ್ಷರಾದ ಗಣೇಶ್ ಪೆರಂಪಳ್ಳಿ, ಬಬ್ಬರ‍್ಯ ದೇವಸ್ಥಾನದ ರ‍್ಮರ‍್ಶಿಗಳಾದ ಪಿ ಎನ್ ಶಶಿಧರ್ ರಾವ್, ತಾಂಗೋಡು ಸುಬ್ರಮಣ್ಯ ದೇವಸ್ಥಾನದ ರಾಘವೇಂದ್ರ ಭಟ್, ಜಗದೀಶ್ ಆಚರ‍್ಯ, ರಾಯಲ್ ಪದಾಧಿಕಾರಿಗಳಾದ ರತ್ನಾಕರ್ ಇಂದ್ರಾಳಿ, ಮಂಜುನಾಥ್ ಮಣಿಪಾಲ, ಲಕ್ಷ್ಮಿ ಕಿನ್ನಿಮೂಲ್ಕಿ, ಹಾಜರಿದ್ದರು.
ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಭಟ್ ಸ್ವಾಗತಿಸಿದರು. ರಕ್ಷಿತ್ ಕೋಟ್ಯಾನ್ ವಂದಿಸಿದರು. ಸುಧಾಕರ್ ಪೆರಂಪಳ್ಳಿ ಕರ‍್ಯಕ್ರಮ ಸಂಯೋಜಿಸಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply