ಕೊಡವೂರು ಸುಮನಸಾ ರಂಗಹಬ್ಬ~9ಕ್ಕೆ ಚಾಲನೆ

ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಭಾನುವಾರ ಕೊಡವೂರು ಸುಮನಸಾ ವತಿಯಿಂದ ಮಾ.28ರ ವರೆಗೆ  ಜರುಗುವ ‘ರಂಗಹಬ್ಬ~ 9ನ್ನು’ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್  ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ದಲ್ಲಿ ಒಳ್ಳೆತನ ಉಳಿಸುವಲ್ಲಿ ನಾಟಕಗಳು ಕೊಡುಗೆ ನೀಡಿದ್ದು, ನಾಟಕಗಳಿಂದ ಮನಪರಿವರ್ತನೆ ಸಾಧ್ಯವಿದೆ ಎಂದರು.
ಕೊಡವೂರು ಸುಮನಸಾ ಸಂಸ್ಥೆ ರಂಗಚಟುವಟಿಕೆ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮಾತನಾಡಿ, ಯಕ್ಷಗಾನ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಇಲಾಖೆ ನಿರಂತರ ಬೆಂಬಲ ನೀಡುತ್ತಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ  ರಂಗನಟ ಸುಕುಮಾರ್ ಮೋಹನ್ ಮುದ್ರಾಡಿಯವರನ್ನು “ರಂಗಸಾಧಕ” ಗೌರವ ನೀಡಿ ಸನ್ಮಾನಿ ಸಲಾಯಿತು.
 
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು, ಸ್ಮರಣಿಕಾ ಸಂಸ್ಥೆಯ ದಿವಾಕರ್ ಸನಿಲ್, ನಾಗರಾಜ ಸುವರ್ಣ ಕೊಡವೂರು, ಅಂಬಲಪಾಡಿ ಗ್ರಾ.ಪಂ ಸದಸ್ಯ ಲಕ್ಷ್ಮಣ ಪೂಜಾರಿ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಧ್ಯಕ್ಷ ಎಂ.ಎಸ್ ಭಟ್, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಇದ್ದರು. ಸುಮನಸಾ ಸಂಸ್ಥೆಯ ಕಾರ್ಯದರ್ಶಿ ಜೀವನ್ ‌ಕುಮಾರ್ ವಂದಿಸಿದರು, ಅಕ್ಷತ್ ಅಮೀನ್ ನಿರೂಪಿಸಿದರು. 
 

ಬಳಿಕ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ವತಿಯಿಂದ ಕನ್ನಡ ನಾಟಕ ‘ಗೆಲಿಲಿಯೋ’

​ಪ್ರದರ್ಶನ ​ಗೊಂಡಿತು.

 

 

 
 
 
 
 
 
 
 
 
 
 

Leave a Reply