ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿನಿ ಸಾವು

ಪುತ್ತೂರು: ವಿವೇಕಾನಂದ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರೇಯಾ ಪಕ್ಕಳ (16 ) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಕುಂಡಾಪು ಪದ್ಮ ಪಕ್ಕಳ ಹಾಗೂ ಉಮಾವತಿ ದಂಪತಿಯ ಎರಡನೇ ಪುತ್ರಿ ಶ್ರೇಯಾ, ಪಕ್ಕಳ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.ಆರೋಗ್ಯವಾಗಿದ್ದ ಶ್ರೇಯಾಳಿಗೆ ಇಂದು ಬೆಳಿಗ್ಗೆ ಕಾಣಿಸಿಕೊಂಡ ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

 
 
 
 
 
 
 
 
 
 
 

Leave a Reply