ಆ ಉಸಿರಾಡೋ ಜೀವಕ್ಕೊಂದು ಮುದ್ದಾದ ಹೆಸರು~ ರಮ್ಯಾರಾಕೇಶ್

ದೇಹಕ್ಕೊಂದು ಉಸಿರು
ಆ ಉಸಿರಾಡೋ ಜೀವಕ್ಕೊಂದು ಮುದ್ದಾದ ಹೆಸರು..

ಎಷ್ಟೇ ಎತ್ತರಕ್ಕೆ ನೀ ಬೆಳದರೂ.. ಹೆಸರು ಮಾಡಿದರೂ.. ಉಸಿರು ನಿಂತರೆ?..

ಹೆಸರಲ್ಲೇನಿದೆ? ಬದಲಾಯಿಸಬಹುದು ಹೆಸರನ್ನು ನಮ್ಮಿಚ್ಚೆಯಂತೆ..

ಸಾಧ್ಯವೇ ನಮ್ಮಿಂದ.. ಒಂದೊಮ್ಮೆ ಹೋದ ಆ ಉಸಿರನ್ನು ಮಗದೊಮ್ಮೆ ತರಲು?..

ಬೆನ್ನ ಬಿಡದು ಯಾರನ್ನು ವಿಧಿಬರಹ..
ಪ್ರಯತ್ನಿಸಿದರು ಸಾಧ್ಯವಾಗದು ಅಳಿಸಲು ಆ ಪರಮಾತ್ಮ ಬರೆದ ಹಣೆಬರಹ…

ಮರುಜನುಮದ ಅರಿವು ನಮಗಿಲ್ಲ..
ಮಾಡಿರೋ ಕರ್ಮಗಳ ತೊಳೆಯಲು ಸಾಗೋಣ.. ಭಕ್ತಿಮಾರ್ಗದ ಕಡೆ ನಾವೆಲ್ಲಾ…

~ ರಮ್ಯಾರಾಕೇಶ್

 
 
 
 
 
 
 
 
 
 
 

Leave a Reply