ಸೇವಾಸಂಗಮ ಅಮೃತ ಭಾರತಿ ಶಿಶುಮಂದಿರ ಹೆಬ್ರಿ :  ರಕ್ಷಾಬಂಧನ ಕಾರ್ಯಕ್ರಮ

ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದಲ್ಲಿ ರಕ್ಷಾಬಂಧನದ ಕಾರ್ಯಕ್ರಮ ನೆರವೇರಿತು. ರಕ್ಷೆಯ ಬಂಧನ ಅಣ್ಣ ತಂಗಿಯ ಮಧುರ ಸಂಬಂಧವನ್ನು ತಿಳಿಸುವ ಭಾವನೆಯಾಗಿದೆ.
ಕಾರ್ಯಕ್ರಮ ಸಮಾಜದಲ್ಲಿ ಒಗ್ಗಟ್ಟು ಸುರಕ್ಷತೆ ಬಲವನ್ನು ನೀಡುವಲ್ಲಿ ಮತ್ತು ಸಮಾಜದ ಐಕ್ಯತೆಗಾಗಿ ರಾಷ್ಟ್ರದ ಏಕತೆಗಾಗಿ ರಕ್ಷಾಬಂಧನ ಕಾರ್ಯಕ್ರಮ ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿದೆ . ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ಎನ್ನುವ ಸಂದೇಶವನ್ನು ಈ ರಕ್ಷಾಬಂಧನ ನೀಡುತ್ತಿದೆ.
 
ರಕ್ಷಾ ಬಂಧನ ಕಾರ್ಯಕ್ರಮ ಮಹಾಭಾರತದಲ್ಲಿ ಕೃಷ್ಣ-  ದ್ರೌಪದಿ ಅಣ್ಣತಂಗಿಯಾದ ಸಂಬಂಧದ ಘಟನೆಯನ್ನು ಕೂಡ ಉದಾಹರಣೆಯಾಗಿ ಹೇಳಿದರು.
ರಕ್ಷೆಯು ಮಾನವ ಮಾನವನನ್ನು ಒಂದು ಮಾಡುತ್ತದೆ. ಹೃದಯ ಹೃದಯದ ಬಡಿತವನ್ನು ಒಂದುಗೂಡಿಸುತ್ತದೆ ಎಂದು ಮಹೇಶ ಹೈಕಾಡಿಯವರು ಹೇಳಿದರು.
         ರಕ್ಷಾಬಂಧನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ಹೈಸ್ಕೂಲ್ ವಿಭಾಗದ ಉಪಮುಖ್ಯೋಪಾಧ್ಯಾಯರು  ಶ್ರೀಯುತ ಮಹೇಶ್ ಹೈಕಾಡಿ ಮಾತನಾಡಿದರು.
 
ವೇದಿಕೆಯಲ್ಲಿ ಶಿಶುಮಂದಿರ ಕಮಿಟಿ ಸದಸ್ಯರು ಶ್ರೀಮತಿ ಲಕ್ಷ್ಮೀ, ಶ್ರೀಮತಿ ನಂದಿನಿ ಡಾoಗೆ, ಶ್ರೀಮತಿ ಆಶಾ ನಾಯಕ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತ ಪರಿಚಯ ಶಿಶುಮಂದಿರದ ಮಾತಾಜಿ ಮಲ್ಲಿಕಾ ,ರಕ್ಷಾ ಬಂಧನದ ಸಂದೇಶವನ್ನು ವಾಚಿಸಿದವರು ಶ್ರೀಮತಿ ಆಶಾ ನಾಯಕ್ ,   ಕಾರ್ಯಕ್ರಮದ ನಿರೂಪಣೆ  ಅನಿತಾ ಮಾತಾಜಿ, ಶಿಶುಮಂದಿರ ಸಹಾಯಕಿ ಶ್ರೀಮತಿ ವನಜ ಸಹಕರಿಸಿದರು. 
ಶಿಶುಮಂದಿರದ ಪುಟಾಣಿಗಳು ಹಾಗು ಪಾಲಕರು ಸೇರಿದಂತೆ ಒಟ್ಟು 46 ಜನ ಪೋಷಕರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಧನ್ಯವಾದ ಸಮರ್ಪಣೆಯನ್ನು ಮಲ್ಲಿಕಾ ಮಾತಾಜಿ ಮಾಡಿದರು. ಶಿಶುಮಂದಿರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಈ ಕೆಳಗಿನ ಶಾಲೆಗಳಲ್ಲಿ ಆಚರಿಸಲಾಯಿತು.
1)ಸ. ಹಿ. ಪ್ರಾ. ಶಾಲೆ ಕನ್ಯಾನ.
2)ಸ. ಹಿ. ಪ್ರಾ. ಶಾಲೆ ಸೀತಾನದಿ.
3)ಸ. ಕಿ. ಪ್ರಾ. ಶಾಲೆ ನೆಲ್ಲಿಕಟ್ಟೆ, ಮುದ್ರಾಡಿ.
4)ಸ. ಹಿ. ಪ್ರಾ. ಶಾಲೆ ಮುದ್ರಾಡಿ.
5)ಆಶ್ರಮ ವಸತಿ ಶಾಲೆ ಹೆಬ್ರಿ.
ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
 
 
 
 
 
 
 
 
 
 
 

Leave a Reply