ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ ಸ್ವಂತ ಸೂರು ಕಟ್ಟಲು ಅವಕಾಶ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿ (ಅಗ್ರಿಕಲ್ಚರ್ zone) 10 ಸೆಂಟ್ಸ್ ಜಾಗ ಮತ್ತು ,35 ಪರ್ಸೆಂಟ್ ಕವರೇಜ್ ಮೀರದಂತೆ 3000 ಚದರ ಅಡಿ ಸ್ವಂತ ಮನೆ ಕಟ್ಟಲು , ವಲಯ ನಿಯಮಾವಳಿಯಲ್ಲಿ ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ ರಘುಪತಿ ಭಟ್ಟರಿಗೆ, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ , ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಮತ್ತು ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ ಮತ್ತು ಆಡಳಿತದ ತಂಡಕ್ಕೆ ಹೃದಯಾಂತರಾಳದ ಧನ್ಯವಾದಗಳು. ಈ ಮೂಲಕ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 3000 ರಷ್ಟು ಮಂದಿಗೆ ತನ್ನ ಸ್ವಂತ ಸೂರು ಕಟ್ಟಲು ಅವಕಾಶ ಸಿಗುತ್ತದೆ.. ಕಳೆದ ಎಂಟು ವರ್ಷಗಳಿಂದ ತನ್ನ ಸ್ವಂತ ಮನೆಕಟ್ಟಲು ಕಾತರದಿಂದ ಕಾಯುತ್ತಿದ್ದ ಉಡುಪಿಯ ಜನತೆಗೆ ಅತ್ಯಂತ ಸಂತಸದ ಸುದ್ದಿ
ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ
ಕೆ ರಾಘವೇಂದ್ರ ಕಿಣಿ ಹರ್ಷ ವ್ಯಕ್ತಪಡಿಸಿದ್ದಾರೆ

 
 
 
 
 
 
 
 
 
 
 

Leave a Reply