ಪ್ರವಚನ ಮಾಲಿಕೆ ಭಾಗ-೧ ~ಡಾ.ಮಧುಸೂದನ್ ಭಟ್

ಮಹಾಭಾರತದ ಕಾಲದಲ್ಲಿ ರಾಜಕೀಯ ಬಹಳ ಪರಿಶುದ್ಧವಾಗಿತ್ತು ರಾಜ ಪ್ರಜೆಗಳನ್ನು ನಿಯಂತ್ರಣಮಾಡುತ್ತಲಿದ್ದ, ರಾಜನನ್ನು ಧರ್ಮ ನಿಯಂತ್ರಣ ಮಾಡುತ್ತಲಿತ್ತು. ಧರ್ಮಶಾಸ್ತ್ರದ ಪ್ರಮಾಣವನ್ನ ಎಲ್ಲಾ ಜಾತಿಮತ ಪಂಗಡದವರು ಒಕ್ಕೊರಲಿನಿಂದ ಸ್ವಾಗತಿಸುತ್ತಿದ್ದರು. ಧರ್ಮಶಾಸ್ತ್ರ ಪ್ರಮಾಣದಿಂದ ಯಾವುದೇ ಶಾಸನವನ್ನು ಹೇರಿದರೂ ಕೂಡ ಪ್ರಜೆಗಳು ಅದನ್ನ ತಲೆಬಾಗಿ ಸ್ವೀಕಾರ ಮಾಡುತ್ತಿದ್ದರು ಹೀಗಾಗಿ ಧರ್ಮದ ರೀತಿಯಲ್ಲಿ ಆಡಳಿತ ನಡೆಯುತ್ತಲಿದ್ದುದರಿಂದ ರಾಜನಿಗೆ ರಾಷ್ಟ್ರವನ್ನು ನಡೆಸಲು ಏನು ಸೌಲಭ್ಯಗಳು ಒದಗಬೇಕೋ ದೇವಾನುಗ್ರಹದಿಂದ ಅದು ರಾಜನಿಗೆ ಪ್ರಾಪ್ತವಾಗುತ್ತಲಿತ್ತು. ಈ ರೀತಿಯಾಗಿ ಯುಧಿಷ್ಠಿರನ ರಾಜ್ಯಭಾರದಕಾಲದಲ್ಲಿ ಬೊಕ್ಕಸ ತುಂಬಿ ತುಳುಕುತ್ತಾ ಇತ್ತು ಇದರ ಅಪಾರವಾದ ನಿಧಿಯಿಂದ ದೊಡ್ಡ ರಾಜಸೂಯ ಯಾಗವನ್ನು ಕೃಷ್ಣನ ಅನುಗ್ರಹದಿಂದ, ವೇದವ್ಯಾಸರ ನೇತೃತ್ವದಲ್ಲಿ ಯುಧಿಷ್ಠಿರ ಮಾಡಲು ಪ್ರಾರಂಭಿಸುತ್ತಾನೆ. ಎಂಬುವ ಇಂದಿನ ಪ್ರವಚನದ ಒಂದು ಭಾಗ ಸಮಾಪ್ತವಾಯಿತು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಮಹಾಭಾರತದ ಮಹತ್ವವನ್ನು ವಿವರಿಸಿ, ಮಹಾಭಾರತದಲ್ಲಿರುವ ಮೂರು ಅರ್ಥಗಳು ಕೆಲವರು ಮನ್ಮೋದಿಗಳನ್ನ ಪ್ರತಿಪಾದನೆ ಮಾಡುತ್ತದೆ ಎಂದು ಹೇಳುವರು, ಇನ್ನೂ ಕೆಲವರು ಆಸ್ತಿಕತೆಯನ್ನು ಪ್ರತಿಪಾದನೆ ಮಾಡುತ್ತದೆ ಎಂದು ಹೇಳುವರು, ಮತ್ತೆ ಕೆಲವರು ಉಪವಿಚಾರ ಪರವಾಗಿ ಅರ್ಥವನ್ನು ಮಹಾಭಾರತ ಪ್ರತಿಪಾದಿಸುತ್ತಿದೆ ಎಂಬುವ ಸಾಮಾಜಿಕ ಅರ್ಥವನ್ನು ಕೂಡ ಪರ್ಯಾಯ ಶ್ರೀಗಳು ಈ ಸಂದರ್ಭದಲ್ಲಿ ವಿವರಿಸಿದರು.

 
 
 
 
 
 
 
 
 
 
 

Leave a Reply