ಬಹುಮಾನ್ಯ ಎ.ಪಿ.ಉಸ್ತಾದ್ ಅವರ ಹೇಳಿಕೆ ಇಡೀ ಮುಸ್ಲಿಂ ಸಮುದಾಯಕ್ಕೆ ಮಾರ್ಗದರ್ಶಿ ಸಂದೇಶ~ ಸಲೀಂ ಅಂಬಾಗಿಲು.

ಈ ದೇಶದ ಸಂವಿಧಾನ ನ್ಯಾಯಾಂಗ ವ್ಯವಸ್ಥೆಗಳನ್ನೇ ಪ್ರಶ್ನಿಸುವಂತಹ ವಿದ್ಯಮಾನಗಳು ಇಂದಿನ ದಿನಗಳಲ್ಲಿ ಅಘಾತಾಕಾರಿ ಚಿಂತನೆಗಳೊಂದಿಗೆ ನಡೆಯುತ್ತಿರುವುದು ಈ ದೇಶದ ಸೌಹಾರ್ದಯುತ ಒಗ್ಗಟ್ಟು, ಧಾರ್ಮಿಕ ಸಹಬಾಳ್ವೆ ಗೆ ಸವಾಲಗುತ್ತಿದೆ.ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಎಂ.ಸಲೀಂ ಅಂಬಾಗಿಲು ಅತಂಕ ವ್ಯಕ್ತಪಡಿಸಿದ್ದಾರೆ.

ದೇಶವೇ ಸರ್ವಸ್ವ ಎಂದು ನಂಬಿಕೆ ಇರುವ ನಮಗೆ ಮುಸ್ಲಿಂ ಸಮುದಾಯದ ಅತ್ಯುನ್ನತ ಪಂಡಿತರು ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ಸಾಂದರ್ಭಿಕ ಹೇಳಿಕೆ ಮುಸ್ಲಿಂ ಸಮುದಾಯದ ವಿಧ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಇಡೀ ಸಮುದಾಯಕ್ಕೆ ಅನುಕರಣೀಯ ನುಡಿಗಳಾಗಿರುತ್ತದೆ.ಎಂದಿರುವ ಅವರು ಇಂತವರ ಸಂದೇಶಗಳನ್ನು ಪರಿಪಾಲಿಸಿ ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ, ಹಾಗು ಸೌಹಾರ್ದಯುತ ಬದುಕಿನ ನೆಲೆಗಟ್ಟನ್ನು ಭದ್ರಗೊಳಿಸಬೇಕಾಗಿದೆ ಎಂದಿರುವ ಅವರು ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲಾ ಶೈಕ್ಷಣಿಕ ಆಗುಹೋಗುಗಳಲ್ಲಿ ವಿಧ್ಯಾರ್ಥಿಗಳು ಹಾಗು ಸರ್ವ ಮುಸ್ಲಿಂ ಸಮುದಾಯ ಸರ್ಕಾರ, ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ ಸಹಬಾಳ್ವೆ ನಡೆಸುವುದು ಅನಿವಾರ್ಯ ಹಾಗು ನಿಶ್ಚಿತವಾಗಲಿ ಎಂದು ಸಲೀಂ ಅಂಬಾಗಿಲು ಅವರು ಅಶಯ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply