ರಾಗರತ್ನ ಮಾಲಿಕೆ

ರಾಗಧನ ಉಡುಪಿಯ ‘ಗೃಹ ಸಂಗೀತ’ ಸರಣಿ ಕಾರ್ಯಕ್ರಮ ಆರಂಭ. ಶಾಸ್ತ್ರೀಯ ಸಂಗೀತ ಉಳಿದರೆ ಮಾತ್ರ ಎಲ್ಲಾ ಸಂಗೀತಗಳು ಉಳಿಯುತ್ತವೆ. ಎಲ್ಲಾ ವ್ಯಾವಹಾರಿಕ ಒತ್ತಡಗಳ ಮಧ್ಯೆ ಒಳ್ಳೆಯ ಸಂಗೀತ ಆಲಿಸುವುದು ಅದಕ್ಕೆ ಪರಿಹಾರ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಸಭಾ ಸದಸ್ಯೆ ಶ್ರೀಮತಿ ಕಲ್ಪನಾ ಸುಧಾಮ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯ ರಾಗಧನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಗೃಹಸಂಗೀತ ಕಾರ್ಯಕ್ರಮದ ಪ್ರಥಮ ಸಂಗೀತ ಕಚೇರಿಯನ್ನು ಮಣಿಪಾಲದ ಎಎಲ್ಎನ್. ಲೇಔಟ್ ನಲ್ಲಿರುವ ಶ್ರೀ ನರಸಿಂಹ ನಾಯಕ್ ಅವರ ನಿವಾಸದಲ್ಲಿ ನಡೆಸಲಾಯಿತು. ಬೆಂಗಳೂರು ಸಹೋದರರೆಂದು ಖ್ಯಾತರಾದ ಶ್ರೀ ಹರಿಹರನ್ ಹಾಗೂ ಶ್ರೀ ಅಶೋಕ್ ಇವರ ಅದ್ಭುತವಾದ ಸಂಗೀತ ಕಛೇರಿ ನಡೆಯಿತು. ಇವರಿಗೆ ವಯಲಿನ್ ನಲ್ಲಿ ಮತ್ತೂರು ವಿಶ್ವಜಿತ್, ಮೃದಂಗದಲ್ಲಿ ಶ್ರೀ ಅನಿರುದ್ಧ ಭಟ್ ಹಾಗೂ ಮೋರ್ಸಿಂಗ್ ನಲ್ಲಿ ಡಿಎಸ್ ಪ್ರಸನ್ನ ಕುಮಾರ್ ಸಹಕರಿಸಿದರು. 150ಕ್ಕೂ ಹೆಚ್ಚು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷಪಟ್ಟರು. ರಾಗಧನ ಅಧ್ಯಕ್ಷ ಡಾ. ಶ್ರೀಕಿರಣ ಹೆಬ್ಬಾರ್ ಸ್ವಾಗತಿಸಿದರು, ಕಾರ್ಯದರ್ಶಿ ಉಮಾಶಂಕರಿ ವಂದಿಸಿದರು.

 
 
 
 
 
 
 
 
 
 
 

Leave a Reply