ಸಂಶೋಧನೆ ಮನುಕುಲದ ಅಗತ್ಯಗಳಲ್ಲೊಂದು- ಪ್ರೊ. ಶೇರಿಗಾರ್.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ರಸಾಯನ ಶಾಸ್ತ್ರದ ಇತ್ತೀಚಿನ ಬೆಳವಣಿಗೆಗಳ ಒಂದು ದಿನದ ವಿಚಾರ ಸಂಕೀರ್ಣವನ್ನು ಜುಲೈ 29 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ಡಾ. ಜಿ.ಎಸ್. ಚಂದ್ರಶೇಖರ್ ಸಂಶೋಧನೆಯ ಅಗತ್ಯತೆಯ ಬಗ್ಗೆ ಮಾತನಾಡಿದರು. ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಬಿ.ಎಸ್. ಶೇರಿಗಾರ್‌ರವರು ರಸಾಯನಶಾಸ್ತçದ ಕಾರ್ಯವ್ಯಾಪ್ತಿ, ಉಪಯುಕ್ತತೆಯ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಎನ್.ಇ.ಟಿ.ಕೆ. ಸುರತ್ಕಲ್‌ನ ರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಡಾ | ಅರುಣ ಎಂ. ಇಸ್ಲೂರುರವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ | ರಾಘವೇಂದ್ರ ಎ ರವರು ರಸಾಯನಶಾಸ್ತ್ರ ವಿಭಾಗದ ಚಟುವಟಿಕೆ ಮತ್ತು ಸಂಶೋಧನೆಗಳ ಬಗ್ಗೆ ಮಾತನಾಡಿದರು. ಡಾ | ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಡಾ | ಮಹೇಶ ಭಟ್ ವಂದಿಸಿದರು. ಶ್ರೀಮತಿ ಸುಪರ್ಣ ಮತ್ತು ಕು. ರಶ್ಮಿ ನಿರ್ವಹಿಸಿದರು. ಕು. ಆಶ್ರಿತ ಉಡುಪ ಪ್ರಾರ್ಥಿಸಿದರು.

Leave a Reply