Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ಪುತ್ತಿಗೆ ಶ್ರೀಪಾದರು ವಿಶ್ವಕ್ಕೆ ಹಿಂದುತ್ವವ ಪರಿವ್ರಾಜಕ – ಶಾಸಕ ರಘುಪತಿ ಭಟ್

ಮಧ್ವ ಸಂದೇಶವನ್ನು, ಹಿಂದುತ್ವದ ಸಾರವನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಪುತ್ತಿಗೆ ಶ್ರೀಪಾದರಿಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.​ ನವ ವೃಂದಾವನ ಸೇವಾ ಪ್ರತಿಷ್ಠಾನ (ರಿ.)  ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಇವರು  ದಿನಾಂಕ 02-09-2020 ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು ಇಲ್ಲಿ ಆಯೋಜಿಸಿದ ಶ್ರೀಮಠದ ಸೇವಾ ಕೈಂಕರ್ಯಗಳ ಅಧಿಕಾರ ಹಸ್ತಾಂತರ, ಗುರು ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶ-ವಿದೇಶಗಳಲ್ಲಿ ಹಿಂದುತ್ವದ ತತ್ವವನ್ನು ಬೋಧಿಸಿ ಇತರ ಧರ್ಮೀಯರನ್ನು ಹಿಂದುತ್ವದೆಡೆಗೆ ಆಕರ್ಷಿಸುವಂತೆ ಮಾಡಿದವರು ಪುತ್ತಿಗೆ ಶ್ರೀಪಾದರು. ವಿದೇಶಗಳಲ್ಲಿ ಪಾಳುಬಿದ್ದ ಚರ್ಚುಗಳನ್ನು ಮಠಗಳಾಗಿ ಬದಲಾಯಿಸಿದ ಕೀರ್ತಿ ಪುತ್ತಿಗೆ ಶ್ರೀಪಾದರಿಗಿದೆ. ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ಹೇಳಿದರು.

ಶ್ರೀ ಮಠದ ಸಂಸ್ಥಾಪಕರಲ್ಲಿ ಪ್ರಮುಖರಾದ ಕೀರ್ತಿಶೇಷ ಹರಿದಾಸ ರತ್ನ ಹೊಸಬೆಟ್ಟು ಶ್ರೀ ವಾದೀಶ ಆಚಾರ್ಯರ ಸ್ವರೂಪೋದ್ದಾರಕ ಗುರುಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪುತ್ತಿಗೆ ಮಠ, ಉಡುಪಿ ಇವರಿಗೆ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ, ಗುರುಪುರ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಠದ ಸೇವಾ ಕೈಂಕರ್ಯಗಳ ಅಧಿಕಾರಗಳ ಹಸ್ತಾಂತರ, ಗುರು ಸಮರ್ಪಣಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ”ಭಜನಾಮೃತ” ಸಿ.ಡಿ.  ಅನಾವರಣ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ  ಪುನರೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ವೇದಾವತಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!