ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ 33ನೇ ಚಾತುರ್ಮಾಸ್ಯ ಸಮಾಪ್ತಿ 

ಸೀತಾನದಿಯಲ್ಲಿ ರಾಮದೇವರ ದೋಣಿ ವಿಹಾರ​ದೊಂದಿಗೆ ಸೀಮೋಲ್ಲಂಘನಗೈದ ಶ್ರೀ ವಿಶ್ವಪ್ರಸನ್ನತೀರ್ಥರು. ಉಡುಪಿಯ ನೀಲಾವರ ಗೋಶಾಲೆಯಲ್ಲಿರುವ ತಮ್ಮ ಶಾಖಾ ಮಠದಲ್ಲಿ  33 ನೇ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು  ಬುಧವಾರ ವ್ರತ ಸಮಾಪ್ತಿಗೊಳಿಸಿದರು . ಬೆಳಿಗ್ಗೆ ಪಟ್ಟದೇವರಾದ ಶ್ರೀರಾಮ ವಿಠಲ ದೇವರಿಗೆ ಮಹಾಪೂಜೆ ನೆರವೇರಿಸಿದ ಬಳಿಕ ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುರ್ಮಾಸ್ಯ ಮೃತ್ತಿಕಾ ವಿಸರ್ಜನೆಗೈದರು.ಅಪರಾಹ್ನ ಗೋಶಾಲೆಯಿಂದ ತಮ್ಮ ಶಿಷ್ಯರೊಡಗೂಡಿ ಮಹಿಳೆಯರ  ಭಜನೆ,​ ​ವಿದ್ಯಾರ್ಥಿಗಳ ಮಂತ್ರಘೋಷ ಗಳೊಂದಿಗೆ ಸಮೀಪದಲ್ಲಿರುವ ಸೀತಾನದೀ ತೀರಕ್ಕೆ ಆಗಮಿಸಿ ಅಲ್ಲಿ ನೀಲಾವರ ,ಚೇರ್ಕಾಡಿ, ಪೇತ್ರಿ ಆರೂರು ಗ್ರಾಮಗಳು, ಬ್ರಹ್ಮಾವರ ತಾಲೂಕು ಪಂಚಾಯತ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ , ಬ್ರಹ್ಮಾವರ ಬ್ರಾಹ್ಮಣ ಸಂಘಗಳ  ಪರವಾಗಿ ಶ್ರೀಗಳಿಗೆ‌ ಗೌರವಾರ್ಪಣೆ ನೆರವೇರಿತು  ಬಳಿಕ ಸೀತಾನದಿಗೆ ಸೀಯಾಳ, ಪುಷ್ಪ ಅರ್ಪಣೆ  ಸಹಿತ ಮಂಗಳಾರತಿ ಬೆಳಗಿದರು . ಸಾಲಂಕೃತ ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿದರು.  ಅದಕ್ಕೂ ಮೊದಲು ಸೀತಾನದಿಗೆ ಸೀಯಾಳ ಅಭಿಷೇಕ ನಡೆಸಿ, ಪುಷ್ಪ ಅರ್ಪಿಸಿ ಮಂಗಳಾರತಿ ಬೆಳಗಿದರು ಮರಳಿ ಬಂದು ಗ್ರಾಮದೇವತೆ ಮಹಿಷಮರ್ದಿನೀ ದೇವಳಕ್ಕೆ ತೆರಳಿ ದೇವಿಯ ದರ್ಶನ ಪಡೆದರು .ದೇವಳದ ಪರವಾಗಿ ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ‌ ಮಧ್ಯಸ್ಥ ಹಾಗೂ ಪ್ರಧಾನ ಅರ್ಚಕ ಕೃಷ್ಣ  ಅಡಿಗ ಮೊದಲಾದವರು ಶ್ರೀಗಳನ್ನು ಬರಮಾಡಿಕೊಂಡು​. ದೇವಳದ ಗೌರವವನ್ನು ಅರ್ಪಿಸಿದರು . ಅಲ್ಲಿಂದ ಉಡುಪಿಗೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಂಡಿತು.  ಇದೇ ಸಂದರ್ಭ  ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಹವ್ಯಾಸಿ ಯಕ್ಷಗಾನ ಸಂಘದ ಕಲಾವಿದರು ದಂಡಕ ದಮನ ಯಕ್ಷಗಾನ ಪ್ರಸಂಗದ ತಾಳಮದ್ದಲೆ ನಡೆಸಿಕೊಟ್ಟರು​.  ಅನೇಕ ವೈಶಿಷ್ಟ್ಯಗಳ ಚಾತುರ್ಮಾಸ್ಯ: ಪೇಜಾವರ ಶ್ರೀಗಳ ಚಾತುರ್ಮಾಸ್ಯವು ಈ ಬಾರಿಯ ಚಾತುರ್ಮಾಸ್ಯ ಅನೇಕ ಕಾರಣಗಳಿಗಾಗಿ ವಿಶಿಷ್ಟವಾಗಿದೆ ​/​ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕಾಲಾನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಶ್ರೀಗಳ ಮೊದಲ ಚಾತುರ್ಮಾಸ್ಯ​./ ಸಾಮಾನ್ಯವಾಗಿ ಉಡುಪಿಯ ಮಠಾಧೀಶರು ಉಡುಪಿಯಿಂದ ಉತ್ತರದ ಬ್ರಹ್ಮಾವರದ ಆಸುಪಾಸಿನ  ಈ ಪ್ರದೇಶಗಳಲ್ಲಿ (ಮುಂದೆ ಶಿರಸಿಯ ಸೋಂದಾದಲ್ಲಿ ನಡೆಸುತ್ತಾರೆ) ಚಾತುರ್ಮಾಸ್ಯ ವ್ರತ ನಡೆಸಿದ್ದಿಲ್ಲ. 

ಇದೇ ಮೊದಲ ಬಾರಿಗೆ ಅದು ನಡೆದಿದೆ​. ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿ ಶ್ರೀಗಳ ಮೊದಲ ಚಾತುರ್ಮಾಸ್ಯ​. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಳೆದ ತಿಂಗಳು  ನಡೆದ ಸಂದರ್ಭದಲ್ಲಿ ನೀಲಾವರದಲ್ಲಿ ಶ್ರೀಗಳು ಶ್ರೀರಾಮದೇವರ ವಿಶೇಷ ಆರಾಧನೆ ನಡೆಸಿದ್ದು‌ ವಿಶೇಷ​. ​

✍️ ಜಿ ವಾಸುದೇವ ಭಟ್ ಪೆರಂಪಳ್ಳಿ

Leave a Reply