ಸಂಧ್ಯಾ ಕಾಲೇಜಿನ ಎನ್. ಎಸ್. ಎಸ್.ವತಿಯಿಂದ ಮಳೆ ಕೊಯ್ಲು ಕಾರ್ಯಕ್ರಮ

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಇದರ ಸಹಯೋಗದಲ್ಲಿ ಜಲಶಕ್ತಿ ಹಾಗೂ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ. ಎಂ. ರೆಬೆಲ್ಲೊ ಅವರು ಮಳೆ ಕೊಯ್ಲಿನ ಬಗ್ಗೆ ಮಾಹಿತಿ ನೀಡಿದರು.

“ಕರಾವಳಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದರೂ ನೀರಿನ ಅಭಾವತೆ ಕಾಡುತ್ತದೆ. ಅಂತರ್ಜಲ ಮಟ್ಟ ಕುಸಿದಿದೆ. ಆದುದರಿಂದ ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣವನ್ನು ವೈಜ್ಞಾನಿಕವಾಗಿ ಮಾಡಬೇಕಾಗಿದೆ, ಕರಾವಳಿಯ ಪ್ರಮುಖ ಬೆಳೆಯಾದ ಭತ್ತದ ಕೃಷಿಗೆ ಭೂಮಿಯನ್ನು ಹದನು ಮಾಡಿ ನೀರನ್ನು ನಿಲ್ಲಿಸುವುದರಿಂದ ಇ0ಗುವಿಕೆಗೆ ಕಾರಣವಾಗುತ್ತಿತು. ಹೆಚ್ಚೆಚ್ಚು ಕೃಷಿ ಚಟುವಟಿಕೆಗಳು ನಡೆದರೆ ಅಂತರ್ಜಲ ಏರಿಕೆಗೆ ಕಾರಣವಾಗುತ್ತದೆ” ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ. ಅಧ್ಯಕ್ಷೀಯ ಮಾತುಗಳನ್ನಾಡುತ್ತಾ “ಇಂದು ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ಜಲ ಸಂಘರ್ಷಗಳನ್ನು ಕಾಣುತ್ತಿದ್ದೇವೆ. ಎಷ್ಟೇ ಶ್ರೀಮಂತ ದೇಶವಾದರೂ ನೀರಿನ ಅಗತ್ಯವಿದೆ. ನಾಗರಿಕತೆ ಬೆಳೆದದ್ದು ನದಿ ಬಯಲಿನಲ್ಲಿ. ಅಂದರೆ ನೀರಿನ ಪ್ರಾಮುಖ್ಯತೆ ಏನೆಂಬುವುದು ತಿಳಿಯುತ್ತದೆ. ಪ್ರತಿಯೊಂದು ಜೀವಕ್ಕೆ ಜೀವವೇ ಜಲ” ಎಂದು ತಿಳಿಸಿದರು.

ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ರಮಾನಂದ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ರಚನಾ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.

 
 
 
 
 
 
 
 
 
 
 

Leave a Reply