ಉಡುಪಿ ಅಂಚೆ ವಿಭಾಗ: ವಿಭಾಗೀಯ ಮಟ್ಟದ ಪ್ರಶಸ್ತಿ ಪುರಸ್ಕಾರ :

ಒಂದು ಸರಕಾರಿ ಕಚೇರಿಯಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯ ನಡೆಯಲು ಅಲ್ಲಿನ‌ ಎಲ್ಲ ಸಿಬ್ಬಂದಿ ಗಳೂ ತಮ್ಮ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತಮ್ಮ ಕರ್ತವ್ಯ ನಿರ್ವಹಣೆಯೊಂದಿಗೆ ತಮ್ಮದೇ ಸಂಸ್ಥೆ ಎಂಬ ಆಸ್ಥೆಯೊಂದಿಗೆ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದವರು ಸಾಧಕರಾಗುತ್ತಾರೆ. ನಮ್ಮ ಎಲ್ಲ ಸಿಬ್ಬಂದಿಗಳೂ ಒಳ್ಳೆಯ ಕೆಲಸಗಾರರೇ. ಆದರೂ ಅವರಲ್ಲಿ ಹೆಚ್ಚಿನ ಸಾಧನೆ ಮಾಡಿದವರನ್ನು ಗುರುತಿಸಿ ,ಗೌರವಿಸಿ,ಅವರು ಬೇರೆಯವರಿಗೆ ಪ್ರೇರಣೆ ಆಗಬೇಕೆಂಬುದು ನಮ್ಮೀ ವಿಭಾಗೀಯ ಮಟ್ಟದ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಆಶಯ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯಪಟ್ಟರು.

ಉಡುಪಿ ಅಂಚೆ ವಿಭಾಗ ಆಯೋಜಿಸಿದ್ದ ವಿಭಾಗೀಯ ಮಟ್ಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಅವರು ಒಂದು ಸಂಸ್ಥೆ ಬೆಳೆಯ ಬೇಕಾದಲ್ಲಿ ಸಂಸ್ಥೆಯ ಗ್ರಾಹಕರು ಹಾಗೂ ಅಲ್ಲಿನ ಸಿಬ್ಬಂದಿಗಳ ಸಹಕಾರ ಅತ್ಯಗತ್ಯ ಎಂದು ನೆನಪಿಸಿ ಕೊಂಡರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಗುರುಪ್ರಸಾದ್ ಉಪಸ್ಥಿತರಿದ್ದರು. ಅಂಚೆ ಅಧೀಕ್ಷಕರ ಕಚೇರಿ ಸಿಬ್ಬಂದಿ ಭಾರತಿ ನಾಯಕ್ ನಿರೂಪಿಸಿದರು. ಸವಿತಾ ಶೆಟ್ಟಿಗಾರ್ ಹಾಗು ಚಿತ್ರಾ ದೇವಾಡಿಗ ಬಹುಮಾನಿತರ ವಿವರ ನೀಡಿದರು. ವಿಘ್ನೇಶ್ ಪ್ರಾರ್ಥಿಸಿದರು.ಪ್ರಶಾಂತ್ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply