ಗ್ರಾಮ ಪಂಚಾಯತ್ ಚುನಾವಣೆ- ಮತಗಟ್ಟೆಗಳ ವಿವರ

ಉಡುಪಿ​: ​ ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ನಡೆಯುವ ಮೊದಲ ಹಂತದ​ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಉಡುಪಿ ತಾಲೂಕಿನ 16, ಬ್ರಹ್ಮಾವರ ತಾಲೂಕಿನ 27, ಬೈಂದೂರು ತಾಲೂಕಿನ​ 15, ಹೆಬ್ರಿ ತಾಲೂಕಿನ 9 ಸೇರಿದಂತೆ ಒಟ್ಟು 67 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

ಮತಗಟ್ಟೆಗಳ ವಿವರ: ಡಿಸೆಂಬರ್ 22 ರಂದು ಮೊದಲನೇ ಹಂತದಲ್ಲಿ , ಉಡುಪಿಯಲ್ಲಿ 124 ಸಾಮಾನ್ಯ, 28ಸೂಕ್ಷ್ಮ , 9 ಅತೀ ​ಸೂಕ್ಷ್ಮ ಸೇರಿದಂತೆ ಒಟ್ಟು 161 ಮತಗಟ್ಟೆಗಳಿದ್ದು, ಹೆಬ್ರಿಯಲ್ಲಿ 62 ಮತಗಟ್ಟೆಗಳಿದ್ದು,ಬೈಂದೂರು ನಲ್ಲಿ 104 ಸಾಮಾನ್ಯ, 14 ಸೂಕ್ಷ್ಮ  10 ಅತೀ  ಸೂಕ್ಷ್ಮ  ಸೇರಿದಂತೆ ಒಟ್ಟು 128 ಮತಗಟ್ಟೆ ಗಳಿದ್ದು,​​ ಮತ್ತು ಬ್ರಹ್ಮಾವರದಲ್ಲಿ 158 ಸಾಮಾನ್ಯ, 47  ಸೂಕ್ಷ್ಮ   ಸೇರಿದಂತೆ ಒಟ್ಟು 205 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ​ ಪ್ರಥಮ ಹಂತದ ಚುನಾವಣೆಯಲ್ಲಿ 448 ಸಾಮಾನ್ಯ, 89  ಸೂಕ್ಷ್ಮ , 19 ಅತೀ ಸೂಕ್ಷ್ಮ ​​ ಸೇರಿದಂತೆ ಒಟ್ಟು 556​ ​ಮತಗಟ್ಟೆಗಳಿವೆ.

ಮೊದಲನೇ ಹಂತದ ಚುನಾವಣೆಗೆ, ಉಡುಪಿಯಲ್ಲಿ 16 ಚುನಾವಣಾಧಿಕಾರಿಗಳು ಮತ್ತು 20 ಸಹಾಯಕಚುನಾವಣಾಧಿಕಾರಿಗಳು, ಬ್ರಹ್ಮಾವರದಲ್ಲಿ 27 ಚುನಾವಣಾಧಿಕಾರಿಗಳು ಮತ್ತು 27 ಸಹಾಯಕ​ ಚುನಾವಣಾಧಿ ಕಾರಿಗಳು, ಬೈಂದೂರು ನಲ್ಲಿ 16 ಚುನಾವಣಾಧಿಕಾರಿಗಳು ಮತ್ತು 17 ಸಹಾಯಕ ಚುನಾವಣಾಧಿಕಾರಿಗಳು, ಹೆಬ್ರಿಯಲ್ಲಿ 9 ಚುನಾವಣಾಧಿಕಾರಿಗಳು ಮತ್ತು 9 ಸಹಾಯಕ ಚುನಾವಣಾಧಿಕಾರಿಗಳು,ಸೇರಿದಂತೆ ಒಟ್ಟು 68 ಚುನಾವಣಾಧಿ​ ​ಕಾರಿಗಳನ್ನು, 73 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 4 ನೋಡೆಲ್ಅಧಿಕಾರಿ ಗಳನ್ನು ನೇಮಿಸಲಾಗಿದೆ.

ಮತದಾರರ ವಿವರ: ಉಡುಪಿಯಲ್ಲಿ 53159 ಪುರುಷ ಮತ್ತು 57281 ಮಹಿಳಾ ಮತದಾರರು, ಬ್ರಹ್ಮಾವರ ದಲ್ಲಿ66684 ಪುರುಷ , 71970 ಮಹಿಳಾ ಮತದಾರರು, ಬೈಂದೂರು ನಲ್ಲಿ 42910 ಪುರುಷ , 44822 ಮಹಿಳಾ ಮತದಾರರು, ಹೆಬ್ರಿಯಲ್ಲಿ 19654 ಪುರುಷ 20621 ಮಹಿಳಾ ಮತದಾರರು ಸೇರಿದಂತೆ ಒಟ್ಟು 182407 ಪುರುಷ,​ 194694 ಮಹಿಳಾ ಮತ್ತು 6 ಇತರೆ ಮತದಾರರು ಸೇರಿದಂತೆ ಒಟ್ಟು 377107 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ​ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply