ಹಳ್ಳದಲ್ಲಿ ತೇಲಿ ಬಂದ 7 ನವಜಾತ ಶಿಶುಗಳ ಶವ

ಬೆಳಗಾವಿ : ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿ. ನಗರದ ಹಳ್ಳದಲ್ಲಿ ಬಿದ್ದ ಡಬ್ಬದಲ್ಲಿ 7
ನವಜಾತ ಶಿಶುಗಳ ಶವ ಪತ್ತೆಯಾಗಿದ್ದು, ಸ್ಥಳೀಯ ಜನರು ಕಂಡು ಶಾಕ್‌ ಆದ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದಲ್ಲಿ ಶುಕ್ರವಾರ ಜೂನ್‌ 24ರ ಬೆಳಗ್ಗೆ ಹಳ್ಳದ ದಂಡೆಯಲ್ಲಿ ಬಿದ್ದಿದ್ದ ಡಬ್ಬಗಳಲ್ಲಿ ಹಾಕಿ ಎಸೆದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ನವಜಾತ ಶಿಶುಗಳ ಶವಗಳನ್ನು ಎಸೆದರು..? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತ ದೇಹ ಕಂಡು ಮೂಡಲಗಿಯ ಜನ ಬಿಚ್ಚಿ ಬಿದ್ದಿದ್ದಾರೆ.

ಈಗಾಗಲೇ ಸ್ಥಳಕ್ಕೆ ಮೂಡಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಘಟನೆಯ ಬೆಳಕಿಗೆ ಬಂದ ಬಳಿಕೆ ಮೂಡಲಗಿ ಜನರ ಹೌಹಾರಿದ್ದು, ಈ ಘಟನೆ ಕುರಿತಾಗಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ನವಜಾತ ಶಿಶುಗಳು ಕಂಡು ಬಂದಿರುವುದು ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.

 
 
 
 
 
 
 
 
 
 
 

Leave a Reply