ಸತೀಶ್ ಜಾರಕಿಹೊಳಿ ವಿರುದ್ಧ ರೋಚಕ ಜಯ ಸಾಧಿಸಿದ ಮಂಗಳಾ ಅಂಗಡಿ

ಬೆಳಗಾವಿ: ಇಂದು ಬೆಳಿಗ್ಗೆನಿಂದ ಅಂತಿಮ ಸುತ್ತಿನ ಮತ ಎಣಿಕೆಯವರೆಗೂ ರೋಚಕತೆಯಿಂದ ಸಾಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಜಯ ಭೇರಿ ಭಾರಿಸಿದ್ದಾರೆ.

 ಮಂಗಳಾ ಅಂಗಡಿ 4048 ಮತಗಳ ಅಂತರದಿಂದ ಕಾಂಗ್ರೆಸ್ ಸ್ಪರ್ಧಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ. ಅತಿ ಕೂತುಹಲ ಮೂಡಿಸಿದ್ದ ಮತ ಎಣಿಕೆ ಮುಗಿದು, ಗೆಲುವು ಸಾಧಿಸಿದ ಮಂಗಳಾ ಈ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply