ದೇಶದಲ್ಲಿ 1 ಸಾವಿರ ರೂಪಾಯಿ ನೋಟು ಮತ್ತೆ ಚಲಾವಣೆ..?

ಸೋಶಿಯಲ್​ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ವಿಡಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ 2ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಲಿದ್ದು 1 ಸಾವಿರ ರೂಪಾಯಿ ನೋಟುಗಳು ಚಾಲ್ತಿಗೆ ಬರಲಿದೆ ಎಂದು ಹೇಳಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವಾಗ ಯಾವ ಹೊಸ ನಿಯಮವನ್ನು ಘೋಷಣೆ ಮಾಡಿಬಿಡುತ್ತೋ ಎಂಬ ಭಯ ಜನಸಾಮಾನ್ಯರಿಗೆ ಎಂದಿಗೂ ಇದ್ದೇ ಇರುತ್ತೆ. ಈ ಎಲ್ಲದರ ನಡುವೆ ಕಳೆದ ಕೆಲವು ದಿನ ಗಳಿಂದ ಹೊಸದೊಂದು ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅದೇನೆಂದರೆ 2023ರ ಜನವರಿ ತಿಂಗಳಿನಿಂದ ದೇಶದಲ್ಲಿ ಮತ್ತೆ 1 ಸಾವಿರ ರೂಪಾಯಿ ಬಳಕೆಗೆ ಬರುತ್ತೆ ಎಂಬ ವಿಚಾರ ಚರ್ಚೆಯಲ್ಲಿದೆ. ಈ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ಕಳೆದ ಕೆಲವು ದಿನ ಗಳಿಂದ ವಿಡಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ 2ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಲಿದ್ದು 1 ಸಾವಿರ ರೂಪಾಯಿ ನೋಟುಗಳು ಚಾಲ್ತಿಗೆ ಬರಲಿದೆ ಎಂದು ಹೇಳಲಾಗಿದೆ.
ಈ ವಿಚಾರ ಕೇಳಿದ ನೆಟ್ಟಿಗರು ಹೌದಾ..? ಮತ್ತೊಮ್ಮೆ ನೋಟ್​ ಬ್ಯಾನ್ ಬಿಸಿ ತಟ್ಟಲಿದ್ಯಾ..? ಹೊಸ 1 ಸಾವಿರ ರೂಪಾಯಿ ನೋಟು ಜಾರಿಗೆ ಬರುತ್ತಾ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಈ ವಿಡಿಯೋ ಸಾಕಷ್ಟು ವೈರಲ್​ ಆದ ಬಳಿಕ ಪಿಐಬಿ ಈ ಸಂಬಂಧ ಫ್ಯಾಕ್ಟ್​ ಚೆಕ್​ ನಡೆಸಿದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು ಕೇಂದ್ರ ಸರ್ಕಾರ ಹೊಸ 1 ಸಾವಿರ ರೂಪಾಯಿ ನೋಟುಗಳನ್ನು ಜಾರಿಗೆ ತರುವ ಯಾವುದೇ ಯೋಚನೆಯಲ್ಲಿಲ್ಲ ಎಂದು ಹೇಳಿದೆ. ಹೀಗಾಗಿ ಇಂತಹ ವದಂತಿಗಳಿಗೆ ಕಿವಿಗೊಡದಂತೆ ಸೂಚನೆಯನ್ನು ನೀಡಿದೆ.
 
 
 
 
 
 
 
 
 
 
 

Leave a Reply