ಚೌಳಿಕೇರಿ ಶ್ರೀ ಮಹಾಗಣಪತಿ ದೇವಾಲಯದಲ್ಲಿನ ಚಿಕಣಿ ಶಾಸನ

ಬಾರಕೂರಿನ ಚೌಳಿಕೇರಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿನ ಶ್ರೀ ಮಹಾಲಿಂಗೇಶ್ವರ ಗುಡಿಯ ಗರ್ಭಗೃಹದ ಎಡ ಬದಿಯ ದ್ವಾರಪಾಲಕ {ಜಯ-ವಿಜಯ} ಇರುವ ಪೀಠದಲ್ಲಿ ಒಂದು ಸಾಲಿನ ಚಿಕಣಿ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪತ್ತೆ ಮಾಡಿರುತ್ತಾರೆ. ಶಾಸನವು 15ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ ‘ಶ್ರೀ ಪ್ರಮದೂತ ಸಂವತ್ಸರದ ಜೆಷ್ಟ ಶು 5 ಲೂ ಶ್ರೀ ಮಹಾಚೌಳಿ’ ಎಂಬ ಉಲ್ಲೇಖವನ್ನು ಹೊಂದಿದೆ.
ಶಾಸನ ಉಲ್ಲೇಖಿತ ಸಂವತ್ಸರದಲ್ಲಿ ಈ ದ್ವಾರಪಾಲಕನ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ಪಟ್ಟಿರುತ್ತಾರೆ. ಏಕೆಂದರೆ ಸಾಮಾನ್ಯವಾಗಿ ದೇವಾಲಯಗಳಲ್ಲಿರುವ ಜಯ-ವಿಜಯರ ಶಿಲ್ಪಗಳು ಏಕರೂಪವಾಗಿರುತ್ತದೆ. ಆದರೆ ಈ ದೇವಾಲಯದಲ್ಲಿನ ಜಯ-ವಿಜಯರ ವಿಗ್ರಹಗಳು ಗಾತ್ರ ಮತ್ತು ಭಂಗಿಯಲ್ಲಿ ಒಂದನ್ನೊಂದು ಹೋಲುವುದಿಲ್ಲ. ಇದರಿಂದ ನಂತರದ ಕಾಲದಲ್ಲಿ ಈ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾಸನವನ್ನು ಹಾಕಿಸಿರಬಹುದು.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ವೆಂಕಟೇಶ ಭಟ್, ಎಮ್.ಎಸ್. ವಿಶ್ವವಿದ್ಯಾನಿಲಯ ಬರೋಡ ಇಲ್ಲಿನ ವಿದ್ಯಾರ್ಥಿ ಗೌರೀಶ್ ಪ್ರಭು ಮತ್ತು ನಿಟ್ಟೆ ಮೆಕಾನಿಕಲ್ ಇಂಜಿನಿಯರ್ ವಿದ್ಯಾರ್ಥಿ ಅಭಿಷೇಕ್ ಶೆಣೈ ಅವರು ಸಹಕಾರ ನೀಡಿದ್ದಾರೆ.
 
 
 
 
 
 
 
 
 
 
 

Leave a Reply