ಕೊಡವೂರು ವಾರ್ಡಿನ ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪ ಅಳವಡಿಕೆ.

​ಕೊಡವೂರು ವಾರ್ಡಿನ ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪ ಉದ್ಘಾಟನಾ ಲಕ್ಷ್ಮೀನಗರ ರಿಕ್ಷಾ ನಿಲ್ದಾಣದಲ್ಲಿ ನಡೆಯಿತು. ಕೆಲವು ತಿಂಗಳ ಹಿಂದೆ ಜನರ ಕುಂದು ಕೊರತೆಗಳನ್ನು ವಿಚಾರಿಸುವ ಸಂದರ್ಭದಲ್ಲಿ ಕೊಡವೂರಿನ ಲಕ್ಷ್ಮೀನಗರ ಆಟೋನಿಲ್ದಾಣದಲ್ಲಿ ಗ್ರಾಮ ಸಭೆಯನ್ನು ನಡೆಸಿದಾಗ ಸೋಲಾರ್ ದೀಪದ ಅವಶ್ಯಕತೆಯನ್ನು ಅಲ್ಲಿನ ರಿಕ್ಷಾ ಚಾಲಕರು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಗಮನಕ್ಕೆ ತಂದಿದ್ದರು.
ಈ ಕುರಿತು ದಾನಿಗಳ ನೆರವಿನಿಂದ ಲಕ್ಷ್ಮೀನಗರ ಆಟೋನಿಲ್ದಾಣಕ್ಕೆ ದಾನಿಗಳಾದ “ಕರಾವಳಿ ಕೋ ಆಪ್ ಕ್ರೆಡಿಟ್ ಸೊಸೈಟಿ ಸಂತೆಕಟ್ಟೆ” ಇವರ ನೆರವಿನಿಂದ ಸೋಲಾರ್ ದೀಪ ಅಳವಡಿಸಿ ಕೊಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು  ಉಮೇಶ್ ಶೆಟ್ಟಿ (ಅಧ್ಯಕ್ಷರು ಕರಾವಳಿ. ಕೋ. ಆ. ಸೊಸೈಟಿ ಸಂತೆಕಟ್ಟೆ ) ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದಯ ಶೆಟ್ಟಿ (ಉಪಾಧ್ಯಕ್ಷರು ಕರಾವಳಿ. ಕೋ. ಆ. ಸೊಸೈಟಿ ಸಂತೆಕಟ್ಟೆ ), ಉದಯಕುಮಾರ್ ಶೆಟ್ಟಿ (ನಿರ್ದೇಶಕರು ಕರಾವಳಿ. ಕೋ. ಆ. ಸೊಸೈಟಿ ಸಂತೆಕಟ್ಟೆ ), ನಾಗರಾಜ್ (ಅಧ್ಯಕ್ಷರು ರಿಕ್ಷಾನಿಲ್ದಾಣ ಲಕ್ಷ್ಮೀನಗರ ) ಹಾಗೂ  ಅಶೋಕ್ ಶೆಟ್ಟಿಗಾರ್ (ವಾರ್ಡ್ ಅಭಿವೃದ್ಧಿ ಸಮಿತಿ ಕೊಡವೂರು) ಇವರು ಉಪಸ್ಥಿತರಿದ್ದರು. ವಿಜಯಕೊಡವೂರು ಇವರು ಸಂಯೋಜಕರಾಗಿ ನೇತೃತ್ವ ವಹಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply