ಆ ಮೀನು ಚಡಪಡಿಸುತಿತ್ತು.. ಪಾಪ ಸ್ವಚ್ಛoದ ವಾದ ಕೊಳದಲ್ಲಿದ್ದ ಮೀನು ಕೊಳದಿಂದ ಆ ಊರಿನ ಮನೆ ಮನೆಗೆ ಕುಡಿಯುವ ನೀರು ಸಪ್ಲೈ ಮಾಡುವ ದೊಡ್ಡ ಟ್ಯಾಂಕರ್ ನ ಟ್ಯಾಂಕಿ ಒಳಗೆ ಬಿದ್ದಿತ್ತು
ಅದಕ್ಕೆ ಬದುಕುಳಿಯುವ ಯಾವ ಅವಕಾಶವೂ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿತ್ತು.
ಬದುಕುವ ಎಲ್ಲಾ ಸಂಭವನೀಯತೆ ಯನ್ನೂ ಲೆಕ್ಕ ಹಾಕಿತು. ನಾನು ಇಲ್ಲೇ ಉಳಿದು ಕೊಂಡರೆ ಆಹಾರ ವಿಲ್ಲದೇ, ಇಲ್ಲ ಇಲ್ಲಿ ನೀರು ಕಾಲಿ ಯಾಗುವಾಗ ಸಾಯುವುದು ಗ್ಯಾರಂಟಿ, ಒಂದು ವೇಳೆ ಔಟ್ಲೆಟ್ ನಿಂದ ಹೋದರು ಯಾರದೋ ಮನೆಯ ಕುಡಿಯುವ ನೀರಲ್ಲಿ ನನ್ನ ನೋಡಿದವರು ಹೊರಗೆಸೆಯ ಬಹುದು ಹಾಗೇ ಸಾಯಬಹುದು.
ಒಟ್ಟಲ್ಲಿ ಸಾವು ಗ್ಯಾರಂಟಿ ಎಂದು ಯೋಚಿಸುತ್ತಿದ್ದಂತೆ ದುಃಖ ಉಮ್ಮಳಿ ಸಿ ಬಂತು ಮೀನಿಗೆ. ತಾನು ನಂಬಿದ್ದ ದೇವರಲ್ಲಿ ಕಣ್ಣು ಮುಚ್ಚಿ ಬೇಡಿ ಕೊಂಡಿತು. ಅಷ್ಟರಲ್ಲಿ ಅದಕ್ಕೇ ಅರಿವಿಲ್ಲದೆ ಔಟ್ಲೆಟ್ ನಿಂದ ಹೊರಬಿದ್ದಿತ್ತು. ಯಾರದೋ ಮನೆಯ ನೀರಿನ ಟ್ಯಾಂಕ್ ಗೆ, ಸುತ್ತ 4,5 ಮಂದಿ ಮೀನು, ಮೀನು ಎಂದು ಬೋಬ್ಬಿಟ್ಟರು.
ಒಂದು ಮಗ್ ಅಲ್ಲಿ ಹಿಡಿದೇ ಬಿಟ್ಟರು. ನನ್ನ ಸಾವು ಬಂದಾಯ್ತು ಎಂದು ತಿಳಿದ ಮೀನು ಇನ್ನೂ ಕಣ್ಣು ಮುಚ್ಚಿ ಭಗವಂತನ ಧ್ಯಾನ ಮಾಡುತ್ತಲೇ ಇತ್ತು. ಯಾರೋ ದೂರ ಎಸೆದ ಅನುಭವ ವಾಯಿತು, ನೀರು ನನ್ನ ದೇಹದಿಂದ ಬೆರ್ಪಟ್ಟಾಗ ಮೀನಿಗೆ ಮತ್ತಷ್ಟು ಭಯವಾಗಿತ್ತು, ಪಾತಾಳ ಕ್ಕೆ ಬೀಳುವಂತೆ ಬಾಸ ವಾಯಿತು. ನೀರಿಲ್ಲದೆ ಉಸಿರು ಕಟ್ಟಿದoತಾಗಿತ್ತು ಆಗಲೂ ಕಣ್ಣು ತೆರೆದಿರಲಿಲ್ಲ ತನ್ನ ದೇವರನ್ನುನೆನೆಯುತಿತ್ತು ಆಗಲೂ. ಇನ್ನೇನು ಜೀವ ಹೋಗಬೇಕೆನ್ನುವಷ್ಟರಲ್ಲಿ ಅಲ್ಲೊಂದು ಪವಾಡ ನಡೆದಿತ್ತು.
ಮೀನು ನೀರಲ್ಲಿ ಇಜಾಡುತಿತ್ತು. ಕಣ್ಣು ಬಿಟ್ಟರೆ ಸ್ವಚ್ಛವಾದ ಬಾವಿ ನೀರೊಳಗೆ ಮೀನಿತ್ತು, ಸುತ್ತಲೂ ತನ್ನದೇ ಜಾತಿಯ ಮೀನುಗಳು ವಾವ್. ಯಾರೋ ಡ್ರಮ್ ಅಲ್ಲಿದ್ದ ನನ್ನನ್ನು ಎತ್ತಿ ತಂದು ಬಾವಿಗೆ ಹಾಕಿದ್ದರು ಪುಣ್ಯಾತ್ಮರು. ಹೀಗೂ ಒಂದು ಪಾಸಿಬಿಲಿಟಿ ಇರಬಹುದೆoದು ಕನಸಲ್ಲೂ ಯೋಚಿಸಿರಲಿಲ್ಲ ಆ ಮೀನು.
ಮತ್ತೆ ನೀರಲ್ಲಿ, ಖುಷಿ ಖುಷಿಯಲ್ಲಿ ಈಜುತಿತ್ತು ಆ ದೇವರಿಗೆ ಮನಸ್ಸಲ್ಲೇ ಮತ್ತೆ ಧನ್ಯವಾದ ಹೇಳುತ್ತಾ.
ವಾವ್ ಅದೆಷ್ಟು ಸುಂದರವಾಗಿದೆ ನೋಡಿ. ಅದೆಷ್ಟೋ ಬಾರಿ ಮುಂದೆ ದಾರಿಯೇ ಇಲ್ಲ ಎಂದು ಅರಿವಾದಾಗ ಮನುಷ್ಯ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾನೆ.
ಆದರೆ ನಮ್ಮ ಹುಟ್ಟಿನ ಮೊದಲು ನಾವೆಲ್ಲಿದ್ದೆವು..?, ಸಾವಿನ ಬಳಿಕ ಎಲ್ಲಿರುತ್ತೇವೆ..?, ಎನ್ನುವ ಅದೆಷ್ಟೋ ಬ್ರಹ್ಮಾಂಡ ರಹಸ್ಯಗಳನ್ನೇ ತಿಳಿಯದ ನಾವು ನಮ್ಮ ಸೀಮಿತ ಯೋಚನಾ ಶಕ್ತಿಯನ್ನಷ್ಟೇ ನಂಬಿ ನನ್ನ ಜೀವನ ಮುಗಿಯಿತು ಎನ್ನುವ ಬದಲು,ಇಂತಹ ಸಂದರ್ಭಗಳಲ್ಲಿ ನಾವು ನಂಬಿ ಕೊಂಡು ಬಂದ ದೇವರಲ್ಲಿ ಸಂಪೂರ್ಣ ಶರಣಾಗತ ರಾಗಿ ಬೇಡಿಕೊಂಡು ಒಂದಷ್ಟು ಹೊತ್ತು ಇದ್ದರೆ ಖಂಡಿತ ಬಹಳಷ್ಟು ಆತ್ಮಹತ್ಯೆಗಳು ನಿಲ್ಲಬಹುದು. ಯಾಕೆಂದರೆ ನಮ್ಮ ಯೋಚನಾ ಶಕ್ತಿಯ ಆಚೆಯು ಕೂಡಾ ಕೆಲವು ಅದ್ಭುತ ಶಕ್ತಿಗಳಿವೆ..
ಮೊದಲು… ನಾವು ಬದಲಾಗಬೇಕಿದೆ…