ಪಿಪಿಸಿ ಸಂಧ್ಯಾ ಕಾಲೇಜಿನ ಎನ್ ಎಸ್ ಎಸ್ ನಿಂದ ಸದ್ಭಾವನಾ ದಿನಾಚರಣೆ

ಸಂಧ್ಯಾ ಕಾಲೇಜಿನ ಎನ್ ಎಸ್ ಎಸ್ ನಿಂದ ಸದ್ಭಾವನಾ ದಿನಾಚರಣೆ

“ ಭಾರತ ಜಾತ್ಯತೀತ ರಾಷ್ಟ್ರ, ಏಕಂ ಸದ್ವಿಪ್ರಾ ಬಹುದಾ  ವದಂತಿ ಎಂಬಂತೆ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ. ಅನೇಕ ಜಾತಿ, ಮತ, ಧರ್ಮ, ಭಾಷೆ, ಸಂಪ್ರದಾಯಗಳ ಒಕ್ಕೂಟ ವ್ಯವಸ್ಥೆಯ ಸಮೃದ್ಧ, ಸಾಮರಸ್ಯ, ಸೌಹಾರ್ದತೆ,  ಸಹಿಷ್ಣುತೆಯಿಂದ ಔದಾರ್ಯ ಮೆರೆದಿದೆ. ಸದ್ಭಾವನೆ ಇದೆ, ಇಲ್ಲಿ ಭಾವೈಕ್ಯತೆ ಇದೆ “ ಎಂದು  ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಸಂಧ್ಯಾ ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ. ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ನಡೆದ ಸದ್ಭಾವನಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಸ್ಕೃತ ಉಪನ್ಯಾಸಕ ಡಾ.ರಾಮಕೃಷ್ಣ ಉಡುಪರವರು ಸದ್ಭಾವನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ  ಸಂಯೋಜಕಿ ದುರ್ಗಾಲಕ್ಷ್ಮಿಯವರು ಶುಭಹಾರೈಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ರಮಾನಂದ ರಾವ್ ರವರು ಕಾರ್ಯಕ್ರಮವನ್ನು  ಆಯೋಜಿಸಿ ಸ್ವಾಗತಿಸಿದರು. ಯೋಜನಾಧಿಕಾರಿ  ಶ್ರೀಲತಾ ಆಚಾರ್ಯ ವಂದಿಸಿದರು.

 
 
 
 
 
 
 
 
 
 
 

Leave a Reply