Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ನಾಯ್ಕನಕಟ್ಟೆ- ಶ್ರೀ ವಾಮನಾಶ್ರಮ ಶ್ರೀ ಗಳ ಬೇಟಿ

ಹೊನ್ನಾವರದ ಹಳದಿಪುರ ಸಂಸ್ಥಾನ ಶಾಂತಾಶ್ರಮ ಮಠದ ಶ್ರೀ‌ವಾಮನಾಶ್ರಮ ಸ್ವಾಮೀಜಿ ಅವರು ತಮ್ಮ ಶಿಷ್ಯರೊಂದಿಗೆ ಕಾಶಿಯಲ್ಲಿ ಮೂಲ ವೈಶ್ಯ ಗುರು ಮಠದ ಪುನರ್’ನಿರ್ಮಾಣಕ್ಕಾಗಿ ದಕ್ಷಿಣ ಕೇರಳ ಕಾಲಡಿಯಿಂದ ಉತ್ತರ ಕಾಶಿ ವಿಶ್ವನಾಥ ಕ್ಷೇತ್ರದ ವರೆಗೆ ನಡೆಯುವ ಶಾಂಕರ ಏಕಾತ್ಮತಾ ಪಾದಯಾತ್ರೆಯ ಮಾರ್ಗದಲ್ಲಿ ಗುರುವಾರ ಬೆಳಿಗ್ಗೆ ನಾಯ್ಕನಕಟ್ಟೆ ವೆಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಿದರು.ದೇವಾಲಯಕ್ಕೆ ವಾದ್ಯಘೋಷದೊಂದಿಗೆ ಪೂರ್ಣಕುಂಬ ಸ್ವಾಗತ ಮಾಡಲಾಯಿತು.ಗುಡ್ಡೆ ಅಂಗಡಿ, ಬೈಂದೂರು ಉಪ್ಪುಂದ ಆಸುಪಾಸಿನ ವೈಶ್ಯ ವಾಣಿ ಸಮಾಜದವರು, ಜಿ ಎಸ್ ಬಿ ಸಮಾಜಬಾಂಧವರು ಹಾಜರಿದ್ದು ಶ್ರೀ ಗುರುಗಳಿಂದ ಫಲಮಂತ್ರಾಕ್ಷತೆ ಸ್ವೀಕರಿಸಿದರು.ಶ್ರೀ ದೇವರಿಗೆ ಅಲಂಕಾರ ಪೂಜೆ, ಸಮಾರಾಧನೆ ,ಸಂಜೆ ಭಜನೆ,
ಆಶೀರ್ವಚನ ರಾತ್ರಿ ಪೂಜೆ,
ದೇವಾಲಯದಲ್ಲಿ ಗುರುಗಳ ಮೊಕ್ಕಾಮ್,ಶುಕ್ರವಾರ ಮುಂದಿನ ಮೊಕ್ಕಾಮಿಗೆ ಹೊರಡಲಿರುವರು, ಈ ಸಂದರ್ಭದಲ್ಲಿ ವೈಶ್ಯವಾಣಿ ಸಮಾಜದ ಪ್ರಮುಖರು, ದೇವಾಲಯದ ಸೇವಾಸಮಿತಿಯ ಅಧ್ಯಕ್ಷರಾದ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ ಕಾರ್ಯದರ್ಶಿ ರಮೇಶ್ ಪೈ, ಸಮಿತಿಯ ಸದಸ್ಯರು,ಅರ್ಚಕರಾದ ಬಾಲಕೃಷ್ಣ ಭಟ್,ಉಪ್ಪುಂದ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪೈ,ಅರ್ಚಕರಾದ ವೇ.ಮೂ.ಹರೀಶ್ ಭಟ್, ಸಮಿತಿಯ ಪಾಂಡುರಂಗ ಪಡಿಯಾರ್,ಮಂಜುನಾಥ ಮಹಾಲೆ,ಓಂ ಗಣೇಶ್ ಕಾಮತ್, ಬೈಂದೂರು ಚಿದಾನಂದ ರಾವ್,ರವೀಂದ್ರ ಕಿಣಿ ಕಂಚಿಕಾನು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!