ವಿಶ್ವ ಮಧುಮೇಹ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ

ಆದರ್ಶ ಆಸ್ಪತ್ರೆ, ಉಡುಪಿಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಆದರ್ಶ ಚಾರಿಟೇಬಲ್ ಟ್ರಸ್ಟ್ ಮತ್ತು ಆದರ್ಶ ಆಸ್ಪತ್ರೆಯ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಹಾಗೂ ಮಧುಮೇಹದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಉಡುಪಿ ತಾಲೂಕಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ರಸಪ್ರಶ್ನೆ ಸ್ಪರ್ಧೆಯು 10.11.2022 ಗುರುವಾರ ಅಲೆವೂರಿನ ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ನಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ. ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಮೊದಲ ವಿಭಾಗದಲ್ಲಿ ಉಡುಪಿ ತಾಲೂಕಿನ ಪ್ರೌಢಶಾಲೆ, ಎರಡನೇ ವಿಭಾಗದಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಸೈನ್ಸ್ ವಿದ್ಯಾರ್ಥಿಗಳು ಭಾಗವಹಿಸಬಹುದು.

ವಿಜೇತರಿಗೆ ಪ್ರಥಮ (5000), ದ್ವಿತೀಯ (4000) ಹಾಗೂ ತೃತೀಯ (3000) ಬಹುಮಾನಗಳನ್ನು 13.11.2022 ಭಾನುವಾರ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ನಗದು ರೂಪದಲ್ಲಿ ನೀಡಿ ಅಭಿನಂದಿಸಲಾಗುವುದು. ಇದೇ ದಿನ ಡಯಾಬಿಟೀಸ್ ಮೇಳವನ್ನೂ ಆದರ್ಶ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದು, ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಮತ್ತು ಮಧುಮೇಹದ ಬಗ್ಗೆ ವಿಶೇಷ ಮಾಹಿತಿಯನ್ನೂ ನೀಡಲಾಗುವುದು.

ರಕ್ತ ಪರೀಕ್ಷೆ, ಮಧುಮೇಹ ಪರೀಕ್ಷೆ, ಹೃದ್ರೋಗ, ಮೂತ್ರ ಪಿಂಡ ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರು ಸೂಕ್ತ ಸಲಹೆ ನೀಡಲಿದ್ದಾರೆ. ಅಗತ್ಯವಿದ್ದಲ್ಲಿ ವೈದ್ಯರ ಶಿಪಾರಸಿನ ಮೇರೆಗೆ ಇಸಿಜಿ, ಸ್ಕಾö್ಯನಿಂಗ್ ಸೌಲಭ್ಯವನ್ನೂ ಬಳಸಿ ತಪಾಸಣೆ ನಡೆಸಲಾಗುವುದು.

10ರಂದು ನಡೆಯಲಿರುವ ಸ್ಪರ್ಧೆಗೆ ಉಡುಪಿ ತಾಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆಯೂ ಹಾಗೂ ೧೩ ರಂದು ನಡೆಯಲಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಅಧ್ಯಕ್ಷಕರೂ ಆಗಿರುವ ಡಾ.ಜಿ.ಎಸ್ ಚಂದ್ರಶೇಖರ್ ವಿನಂತಿಸಿದ್ದಾರೆ.

Leave a Reply