ಇನ್ನು ಮುಂದೆ ಟ್ರೈನ್‌ ಹತ್ತಲು ಪ್ಲಾಟ್‌ ಫಾರ್ಮ್ ಟಿಕೆಟ್‌ ಇದ್ದರೆ ಸಾಕು

ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ, ಟಿಕೆಟ್‌ ಪಡೆದುಕೊಳ್ಳದಿದ್ದರೂ ಕೂಡಾ ನಿರಾಂತಕವಾಗಿ ರೈಲು ಹತ್ತಬಹುದು.ಇದಕ್ಕಾಗಿ ಕೇವಲ ಪ್ಲಾಟ್‌ಫಾಮ್‌ ಟಿಕೆಟ್‌ ಇದ್ದರೆ ಸಾಕು.

ರೈಲು ಹತ್ತಿದ ನಂತರ ಫ್ಲಾಟ್‌ಫಾಮ್‌ ಟಿಕೆಟ್‌ ಅನ್ನು ಟಿಟಿಇಗೆ ತೋರಿಸಿ, ಟಿಕೆಟ್‌ ಖರೀದಿಸಬಹುದು.ಕೊನೆಯ ನಿಮಿಷಗಳಲ್ಲಿ ಗಡಿ ಬಿಡಿಯಿಂದ ರೈಲ್ವೆ ನಿಲ್ದಾಣಗಳಿಗೆ ತಲುಪಿ ಹೈರಾಣವಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗಾಗಿ ಕಲ್ಪಿಸಲಾಗಿದೆ.

ಮುಂಗಡ ಟಿಕೆಟ್‌ ಕಾಯ್ದಿರಿಸದೆ ಸ್ಟೇಷನ್‌ ಗೆ ಬರುವ ಪ್ರಯಾಣಿಕರು ಇದರಿಂದ ಅಲ್ಲಿನ ಟಿಕೆಟ್‌ ಕೌಂಟರ್‌ಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ.ಯುಟಿಸಿ ಆಪ್‌ ಮೂಲಕ ಇಲ್ಲವೇ ಸ್ಟೇಷನ್‌ ಗಳಲ್ಲಿರುವ ವೆಂಡಿಂಗ್‌ ಮೆಷಿನ್‌ ಗಳ ಮೂಲಕ ಪ್ಲಾಟ್‌ಫಾಮ್‌ ಟಿಕೆಟ್‌ ಪಡೆದುಕೊಂಡರೆ ಸಾಕು,ಅದರೊಂದಿಗೆ ರೈಲು ಹತ್ತಬಹುದು.ರೈಲು ಹತ್ತಿದ ನಂತರ ಅದನ್ನು ಟಿಟಿಇಗೆ ತೋರಿಸಿ ಟಿಕೆಟ್‌ ಪಡೆದುಕೊಳ್ಳಬಹುದು.ಅಷ್ಟೇ ಅಲ್ಲ ಸೀಟುಗಳು ಲಭ್ಯವಿದ್ದರೆ ರಿಜರ್ವೇಶನ್‌ ಮಾಡಿಸಿಕೊಂಡು ಬರ್ತ್‌ಕೂಡ ಹೊಂದಬಹುದು.

 
 
 
 
 
 
 
 
 
 
 

Leave a Reply