Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಗಡಿಯಲ್ಲಿ ಚೀನಾವನ್ನು ನಂಬುವಂತಿಲ್ಲ ಹಾಗಾಗಿ ಸರ್ವ ಸನ್ನದ್ಧವಾದ ಭಾರತ

ನವದೆಹಲಿ: ಭಾರತೀಯ ಸೇನೆಯು ಗಡಿ ರಕ್ಷಣೆಗೆ ಸದಾ ಸನ್ನದ್ಧ ಎಂಬುದನ್ನು ಮತ್ತೆ ನಿರೂಪಿಸುತ್ತಿದೆ. ಹೌದು, ಕಳೆದ ಐದು ತಿಂಗಳಿಂದ ಪೂರ್ವ ಲಡಾಖ್​ನಲ್ಲಿ ಇರುವ ಉದ್ವಿಗ್ನ ಸ್ಥಿತಿ ಚಳಿಗಾಲದಲ್ಲೂ ಮುಂದುವರಿಯುವ ಸಾಧ್ಯತೆ ಇರುವಂತಿದೆ. ಹಾಗಾಗಿ ವಾಸ್ತವ ಗಡಿ ನಿಯಂತ್ರಣ ರೇಖೆಯ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತೀಯ ಸೇನೆ ಯುದ್ಧ ಟ್ಯಾಂಕರ್ ಮತ್ತು ದುಸ್ತರ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲ ಪರಿಣಿತ ಸೇನಾ ತುಕಡಿಯನ್ನು ಜಮಾಯಿಸಿದೆ.

ಸೈನ್ಯವು ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದ ಚುಮರ್-ದೆಮ್​ ಚೌಕ್​ನಲ್ಲಿ ಟಿ-90 ಟ್ಯಾಂಕ್, ಟಿ-72 ಟ್ಯಾಂಕ್, ಬಿಎಂಪಿ ವಾಹನಗಳನ್ನು ಇರಿಸಿದೆ. ಇವು ಮೈನಸ್ 40 ಡಿಗ್ರಿ ತಾಪಮಾನದಲ್ಲೂ  ರ್ಯನಿರ್ವಹಿಸುವಷ್ಟು ಶಕ್ತಿ ಹೊಂದಿವೆ. ಪೂರ್ವ ಲಡಾಖ್​ನಲ್ಲಿ 1,597 ಕಿ.ಮೀ. ಉದ್ದ ಎಲ್​ಎಸಿ ಇದ್ದು, ಇಲ್ಲಿ ಚಳಿಗಾಲದಲ್ಲಿ ರಾತ್ರಿ ಮೈನಸ್ 35 ಡಿಗ್ರಿವರೆಗೂ ತಾಪಮಾನ ಇಳಿಕೆಯಾಗುತ್ತದೆ. ಇವುಗಳು ಎಲ್ಲಾ ರೀತಿಯ ಹವಾಮಾನದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಗಡಿ ಬಿಕ್ಕಟ್ಟಿನ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಸೇನಾಧಿಕಾರಿಗಳು ಆರು ಸುತ್ತು ಸಭೆ ನಡೆಸಿದ್ದಾರೆ. ಆದರೆ ಚರ್ಚೆಯಲ್ಲಿ ಒಪ್ಪಿದ ವಿಷಯಗಳನ್ನು ಚೀನಾ ಪಾಲನೆ ಮಾಡುತ್ತಿಲ್ಲ. ಇನ್ನೂ ಗಡಿಯಿಂದ ತನ್ನ ಸೇನಯನ್ನು ಹಿಂದೆ ಕರೆಸಿಕೊಂಡಿಲ್ಲ. ಹೀಗಾಗಿ ಚೀನಾವನ್ನು ನಂಬಲು ಅಸಾಧ್ಯ. ಆದ್ದರಿಂದ ಚಳಿಗಾಲದಲ್ಲೂ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದವೆ ಎಂದು ಮೂಲಗಳು ಮಾಹಿತಿ ನೀಡಿವೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!