Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ದಾಂಪತ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಸಿಎಂ

ಚಂಡಿಘಡ :ಪಂಜಾಬ್​ ಸಿಎಂ ಭಗವಂತ್​​ ಮಾನ್​​ ಇಂದು ಎರಡನೇ ಮದುವೆ ಆಗಿದ್ದು, ಚಂಡಿಘಡದಲ್ಲಿರುವ ಮಾನ್​​ ನಿವಾಸದಲ್ಲೇ ಮದುವೆ ಈ ಶುಭ ಕಾರ್ಯ ನಡೆದಿದೆ.

ಹೌದು.. ಇಲ್ಲಿಯವರೆಗೆ ರಾಜಕೀಯ ವಿಷಯಗಳಿಗೆ ಸುದ್ದಿಯಾಗುತ್ತಿದ್ದ 48 ವರ್ಷದ ಸಿಎಂ ಭಗವಂತ್​​ ಮಾನ್ ಅವರು ಮಾರ್ಚ್ ತಿಂಗಳಲ್ಲಷ್ಟೇ ಪಂಜಾಬ್‌ನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಕಳೆದ ಬೆನ್ನಲ್ಲೇ ಮಾನ್ ಈ ನಿರ್ಧಾರ ಮಾಡಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಅಧಿಕೃತವಾಗಿ ಮದುವೆಯಾಗುತ್ತಿರುವುದು ಇದು ಮೊದಲ ಸಲ ಎನ್ನಲಾಗುತ್ತಿದೆ.

ಮಾನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ವಿಚ್ಛೇದನ ಪಡೆದು ಆರು ವರ್ಷಗಳ ಬಳಿಕ ಅವರು ಮತ್ತೆ ವಿವಾಹ ಬಂಧನಕ್ಕೆ ಒಳಪಡುತ್ತಿರುವುದು ಕುತೂಹಲ ಕೆರಳಿಸಿದೆ. ಅಲ್ಲದೇ ಗೌಪ್ಯವಾಗಿಯೇ ಮದುವೆ ತಯಾರಿ ನಡೆಸಿದ್ದು, ಏಕಾಂಗಿಯಾಗಿದ್ದ ಮುಖ್ಯಮಂತ್ರಿಗೆ ಬಾಳಸಂಗಾತಿಯನ್ನು ಅವರ ಕುಟುಂಬದವರೇ ಹುಡುಕಿದ್ದಾರೆ ಎನ್ನಲಾಗುತ್ತಿದೆ.

ಭಗವಂತ್‌ ಮಾನ್‌ ಮದುವೆಯಾದ ವಧು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಹೆಸರು ಡಾ. ಗುರುಪ್ರೀತ್‌ ಕೌರ್‌ ಎಂದಾಗಿದೆ. ಇನ್ನೂ ಭಗವಂತ್‌ ಅವರ ತಾಯಿಯೇ ಪಂಜಾಬ್‌ನ ಸಂಗ್ರೂರ್‌ನಿಂದ ತಮ್ಮ ಸೊಸೆಯನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಸಿಎಂ ಆಗುವ ಮುನ್ನ ಭಗವಂತ್‌ ಮನ್‌ ಸ್ಟಾಂಡಪ್‌ ಕಾಮಿಡಿಯನ್‌ ಆಗಿದ್ದು, ಹಲವು ಹಾಸ್ಯಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹಾಸ್ಯ ಕಲಾವಿದರಾಗಿದ್ದರೂ ಸದ್ಯ ಪಂಜಾಬ್‌ ರಾಜಕೀಯದಲ್ಲಿ ಪರಿಣಾಮಕಾರಿಯಾಗಿ ಆಡಳಿತ ನಡೆಸುತ್ತಿದ್ದಾರೆ. 2011ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ ಇವರು ಮನ್‌ಪ್ರೀತ್‌ ಸಿಂಗ್‌ ಬಾದಲ್‌ ನೇತೃತ್ವದ ಪೀಪಲ್ಸ್‌ ಪಾರ್ಟಿ ಆಫ್‌ ಪಂಜಾಬ್‌ ಸೇರಿದ್ದರು. 2012ರಲ್ಲಿ ಲೆಹ್ರಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಇನ್ನೂ ಮನ್ ಅವರ ಮೊದಲ ಪತ್ನಿ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಆಕೆಯ ಹೆಸರು ಇಂದರ್‌ಪ್ರೀತ್‌ ಕೌರ್.‌ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಮೊದಲ ಪತ್ನಿಯ ಇಬ್ಬರು ಮಕ್ಕಳು ಹಾಜರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!