ಯಾಸ್’ ಚಂಡಮಾರುತ​ಕ್ಕೆ ಸಿಲುಕಿದ ರಾಜ್ಯಗಳಿಗೆ ತಲಾ 500 ಕೋಟಿ ‘ವಿಶೇಷ ​​ಪ್ಯಾಕೇಜ್’ ಘೋಷಣೆ

ನವದೆಹಲಿ: ಯಾಸ್​ ಸೈಕ್ಲೋನ್​ನ ಅಟ್ಟಹಾಸದಿಂದ ಓಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣ ಹಾನಿ ಉಂಟಾಗಿದೆ. ಎರಡು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಇಂದು ಸಮೀಕ್ಷೆ ನಡೆಸಿದ್ದಾರೆ.​ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರು ಒಡಿಸ್ಸಾಗೆ 500 ಕೋಟಿ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಇದರಂತೆ ತಕ್ಷಣ ಒಡಿಸ್ಸಾಗೆ 500 ಕೋಟಿ ರೂಪಾಯಿಗಳನ್ನು ತಕ್ಷಣಕ್ಕೆ ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಿಗೆ 500 ಕೋಟಿ ರೂಪಾಯಿಗಳನ್ನು ಸಮೀಕ್ಷೆ ನಡೆಸಿದ ಬಳಿಕ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಅಲ್ಲದೇ ಚಂಡಮಾರುತದ ಅಬ್ಬರಕ್ಕೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ, ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.​ ಪಶ್ಚಿಮ ಬಂಗಾಳದಲ್ಲಿ ಯಾಸ್​ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಗೆ ವರದಿ ನೀಡಿದ್ದರು,.

ಪ್ರಧಾನಿ ಮೋದಿ ಅವರು ಯಾಸ್ ಚಂಡಮಾರುತ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಇಬ್ಬರು ನಾಯಕರು 15 ನಿಮಿಷಗಳ ಕಾಲ ಭೇಟಿಯಾಗಿ ಚರ್ಚೆ ನಡೆಸಿದರು. ಚಂಡಮಾರುತದಿಂದ ತೀರಾ ಹಾನಿಗೆ ಒಳಗಾದ ಪ್ರದೇಶಗಳ ಮರುಅಭಿವೃದ್ಧಿಗೆ 20 ಸಾವಿರ ಕೋಟಿ ಪರಿಹಾರ ನೀಡುವಂತೆ ಬ್ಯಾನರ್ಜಿ ಅವರು ಪ್ರಧಾನಿ ಬಳಿ ಮನವಿ ಮಾಡಿದ್ದರು.

ಪ್ರಧಾನಿ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ದರು. ಬಳಿಕ ಯಾಸ್ ಚಂಡಮಾರುತ ಹಾನಿ ಉಂಟು ಮಾಡಿರುವ ಸ್ಥಳಗಳ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

 
 
 
 
 
 
 
 
 
 
 

Leave a Reply