Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ನಿತ್ಯಾನಂದನನ್ನು ಮದುವೆ ಆಗ್ತಾರೆ ಖ್ಯಾತ ಸಿನಿ ತಾರೆ..?

ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಬಗ್ಗೆ ಎಲ್ಲರಿಗೂ ಗೊತ್ತು.

ಭಾರತದಲ್ಲಿ ಆಶ್ರಮ ನಡೆಸುತ್ತಿದ್ದ ಆತ ಹಲವು ಅಕ್ರಮಗಳಲ್ಲಿ ತೊಡಗಿ ದೇಶಬಿಟ್ಟು ಪರಾರಿಯಾಗಿರುವುದು ಹಳೆಯ ವಿಚಾರ, ಎಲ್ಲೋ ಒಂದು ದ್ವೀಪ ಖರೀದಿಸಿ ಅದನ್ನು ಕೈಲಾಸ ದ್ವೀಪ ಎಂದು ನಾಮಕರಣ ಮಾಡಿ ವಾಸ್ತವ್ಯ ಹೂಡಿದ್ದಾರೆ. ಇಂತಹ ಕಳ್ಳ ಸ್ವಾಮೀಜಿಯನ್ನು ಮದುವೆಯಾಗ ಬಯಸಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್.‌

ಪುನೀತ್‌ ರಾಜ್‌ಕುಮಾರ್‌ ಅಭಿನಯದ ʻರಾಜಕುಮಾರʼ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಪ್ರಿಯಾ ಆನಂದ್‌, ತೆಲುಗು, ತಮಿಳು ಹೀಗೆ ಕೆಲ ಭಾಷೆಗಳಲ್ಲಿ ನಟಿಸಿದ್ದಾರೆ.

ಇದೀಗ ತೆಲುಗಿನಲ್ಲಿ ಸುಶಾಂತ್ ಜೊತೆ ʻಮಾ ನೀಳ್ಳ ಟ್ಯಾಂಕರ್‌ʼ ಎಂಬ ವೆಬ್ ಸೀರೀಸ್ ಮಾಡುತ್ತಿದ್ದಾರೆ. ಸರಣಿಯು ಶೀಘ್ರದಲ್ಲೇ G5 OTT ನಲ್ಲಿ ಪ್ರಸಾರವಾಗಲಿರುವುದರಿಂದ ಘಟಕವು ಪ್ರಚಾರಗಳಲ್ಲಿ ನಿರತವಾಗಿದೆ.

ಈ ಸರಣಿಯ ಪ್ರಚಾರದ ಭಾಗವಾಗಿ, ನಾಯಕಿ ಪ್ರಿಯಾ ಆನಂದ್ ನೀಡಿದ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಪ್ರಿಯಾ ಆನಂದ್ ಅವರ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ “ನಾನು ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸುತ್ತೇನೆ. ಇವರ ಬಗ್ಗೆ ಎಷ್ಟೇ ಅಪ ಪ್ರಚಾರವಿದ್ದರೂ ಸಹಸ್ರಾರು ಭಕ್ತರಿಂದ ಪೂಜಿಸಲ್ಪಡುತ್ತಾರೆ.

ಆತನನ್ನು ಮದುವೆಯಾದರೆ, ನನ್ನ ಮನೆತನದ ಹೆಸರನ್ನು ಸಹ ಬದಲಾಯಿಸುವ ಅಗತ್ಯವಿಲ್ಲ” ಎಂದರು. ಈ ಹೇಳಿಕೆಗಳು ತಮಾಷೆಗಾಗಿ ಹೇಳಿದ್ದು ಎಂದಾದರೂ.. ಪ್ರಿಯಾ ಆನಂದ್ ಅವರ ಈ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!