ತಮಿಳುನಾಡು ಪಾಲಿಟಿಕ್ಸ್  ಮೇಲೆ ಅಣ್ಣಾಮಲೈ ಕಣ್ಣು 

 
ದೆಹಲಿ: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು(ಮಂಗಳವಾರ) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಪ್ರಧಾನಿ ನರೇದ್ರ ಮೋದಿ ಕೈ ಗಟ್ಟಿ ಮಾಡಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಬಾಂಧವರು ಎಂದಿದ್ದಾರೆ. ಅಲ್ಲದೆ ತಮ್ಮ ರಾಜಕೀಯ ಜೀವನದ ಹಾದಿ, ಮುಂದಿನ ಗುರಿ ಬಗ್ಗೆಯೂ ಒಂದಷ್ಟು ಮಾಹಿತಿ ಅಂಚಿಕೊಂಡಿದ್ದಾರೆ.
ದೆಹಲಿ ಕೇಂದ್ರ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಮತ್ತು ವಕ್ತಾರ ಸಂಬಿತ್ ಪಾತ್ರಾ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರವಾದ ಹಾಗೂ ಅಭಿವೃದ್ಧಿ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ತಮಿಳುನಾಡಿಗೆ ಬಿಜೆಪಿಯ ಅವಶ್ಯಕತೆಯಿದ್ದು, ಅದರಂತೆ ರಾಜ್ಯದಲ್ಲಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮೋದಿ ಅವರ ಮೇಲೆ ಬಹಳ ವಿಶ್ವಾಸ, ನಂಬಿಕೆ ಇದೆ. ಅವರ ಕೈಯನ್ನು ನಾವೆಲ್ಲರೂ ಗಟ್ಟಿ ಮಾಡಬೇಕು. ತಮಿಳುನಾಡು ಪಾಲಿ ಟಿಕ್ಸ್ ಫ್ಯಾಮಿಲಿ ಓರಿಯಂಟೆಡ್ ಬಿಸಿನೆಸ್​ ತರ ಆಯ್ತು. ಬಿಜೆಪಿ ಪಾರ್ಟಿ ಒಬ್ಬ ಸಾಮಾನ್ಯ ಮನುಷ್ಯರದ್ದು. ನಮಗೇನೂ ದುಡ್ಡಿಲ್ಲ, ನಾವು ರಾಜಕೀಯ ಮಾಡಲು, ತಮಿಳುನಾಡಿನಲ್ಲಿ ಒಳ್ಳೆಯ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಯೇ ಸೂಕ್ತ ಎನ್ನುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುವ ಬಗ್ಗೆ ಸುಳಿವು ನೀಡಿದರು.

ನಾನು ಉಡುಪಿ, ಮಂಗಳೂರು ಎಲ್ಲ ಕಡೆಯೂ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಜನ ಮುಸ್ಲಿಂ, ಕ್ರಿಶ್ಚಿಯನ್, ಹಿಂದು ಸ್ನೇಹಿತ ರಿದ್ದಾರೆ. ಬಿಜೆಪಿ ಎಂಬುದು ಎಲ್ಲ ಸಮು ದಾಯಕ್ಕೂ ಸೇರಿದ್ದು. ನಾನು ಪೊಲೀಸ್​ ಕೆಲಸದಲ್ಲಿ ಇದ್ದಾಗ ಯೂನಿಫಾರಂಗೆ ಮರ್ಯಾದೆ ಕೊಟ್ಟು ಆ ಧರ್ಮಕ್ಕೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡ್ತೀನಿ ಎಂದು ಹೇಳಿದರು.

ನಾನು ಕರ್ನಾಟಕದಲ್ಲಿ ಐಪಿಎಸ್​ ಅಧಿಕಾರಿಯಾಗಿ 9 ವರ್ಷ ಕೆಲಸ ಮಾಡಿದ್ದೇನೆ. ರಾಜೀನಾಮೆ ಕೊಟ್ಟ ಬಳಿಕ ಒಂದು ಫೌಂಡೇಶನ್​ ಸ್ಥಾಪಿಸಿದ್ದೇನೆ. ಸಾಮಾಜಿಕ ಬದಲಾವಣೆ ಹೇಗೆ ಮುಖ್ಯವೋ ಹಾಗೆ ರಾಜಕೀಯದಲ್ಲೂ ಬದಲಾವಣೆ ಅಗತ್ಯ ಎಂಬುದು ಗೊತ್ತಾಯ್ತು. ತಮಿಳುನಾಡಿನಲ್ಲಿ ಬದಲಾವಣೆ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನನ್ನ ಸೇವೆ ಸಮಾಜಕ್ಕಾಗಿಯೇ ಇರಲಿದೆ ಎಂದ ಅಣ್ಣಾಮಲೈ, ಕರ್ನಾಟಕದ ಜನತೆಗೆ ನಾನು ಬಹಳ ಅಭಾರಿಯಾಗಿದ್ದೇನೆ ಎಂದರು.

ಕರ್ನಾಟಕ ಕೇಡರ್‌ನಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ, ರಾಜ್ಯದ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಯುವ ಜನಾಂಗದ ರೋಲ್​ ಮಾಡೆಲ್​ ಆಗಿದ್ದರು. ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದಿದ್ದ ಅವರು ಇದೀಗ ರಾಜಕೀಯದಲ್ಲಿ ಸೇವೆ ಸಲ್ಲಿಸ ಲಿದ್ದಾರೆ.

 
 
 
 
 
 
 
 
 
 
 

Leave a Reply