Janardhan Kodavoor/ Team KaravaliXpress
28.6 C
Udupi
Monday, December 5, 2022
Sathyanatha Stores Brahmavara

ಶ್ರೀಕೃಷ್ಣ ಲೀಲೋತ್ಸವಕ್ಕೆ ಸಜ್ಜಾಗುತ್ತಿದೆ ಕೃಷ್ಣ ನಗರಿ 

ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಶ್ರೀ ಈಶಪ್ರಿಯ ತೀರ್ಥಶ್ರೀಪಾದರುನಡೆಸುತ್ತಿರುವ ಶ್ರೀ ಕೃಷ್ಣಪೂಜಾ ಪರ್ಯಾಯದ ಶ್ರೀಕೃಷ್ಣಜನ್ಮಾಷ್ಟಮಿಯ ಶ್ರೀಕೃಷ್ಣ ಲೀಲೋತ್ಸವ ತಾರೀಕು ಸೆಪ್ಟೆಂಬರ್ 11ರಂದು ನಡೆಯಲಿದ್ದು ಗುರ್ಜಿ ನೆಡುವ ಮುಹೂರ್ತವನ್ನು ನೆರವೇರಿಸಲಾಯಿತು.

ಶ್ರೀಮಠದ ದಿವಾನರಾದ ಶ್ರೀ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯ್ ಗಾರರದ ಶ್ರೀ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿ ಗಳಾದ ಶ್ರೀ ಶ್ರೀರಮಣ ಆಚಾರ್ಯ ವ್ಯವಸ್ಥಾಪಕರಾದ ಶ್ರೀ ಗೋವಿಂದರಾಜ್, ಮೇಸ್ತ್ರಿ ಗಳಾದ ಶ್ರೀ ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಮತ್ತು ಮಠದ ಸಿಬ್ಬಂಧಿಗಳು ಉಪಸ್ಥಿತರಿದ್ದರು

ಶ್ರೀಕೃಷ್ಣಮಠದಲ್ಲಿ ಸೆಪ್ಟಂಬರ್,​10,11​ ಜನ್ಮ ಜನ್ಮಾಷ್ಟಮಿ ಯಂದು ಶ್ರೀ ಕೃಷ್ಣನ ಜನನದ ಸಂಭ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು​, ​ ರಾತ್ರಿ ವಿಶೇಷ ಪೂಜೆ ಕೃಷ್ಣಾರ್ಘ್ಯ ಪ್ರದಾನವನ್ನು ನಡೆಸಲಾಗುವುದು​.  

ವಿಟ್ಲಪಿಂಡಿಯ ಎಂದು ಮೊಸರು ಕುಡಿಕೆ ಉತ್ಸವಕ್ಕೆ 12 ಗುರ್ಜಿ ಮತ್ತು ಎರಡು ಮಂಟಪ ಗಳನ್ನೂ ನಿರ್ಮಿಸಲಾಗುತ್ತದೆ​. ​ಇದರಲ್ಲಿ 8 ಗುರ್ಜಿಗಳು ಎಂಟು ಮಠಗಳನ್ನು ಪ್ರತಿನಿಧಿಸಲು​.ಮೊಸರು ತುಂಬಿದ ಗಡಿಗೆಯನ್ನು ಹೊಡೆಯುವ ಸಂಭ್ರಮವೇ ಮೊಸರು​ ​ಕುಡಿಕೆ ಉತ್ಸವ​. ​ ​​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!